ಅಕ್ರಮ ಪಟಾಕಿ ದಾಸ್ತಾನು:4 ಲಕ್ಷ ಮೌಲ್ಯದ ಪಟಾಕಿ ವಶಕ್ಕೆ

(ನ್ಯೂಸ್ ಕಡಬ)newskadaba.com, ಅ. 09ಕುಂದಾಪುರ: ಅಕ್ರಮವಾಗಿ ಪಟಾಕಿ ದಾಸ್ತಾನಿಟ್ಟ ಮನೆಯೊಂದಕ್ಕೆ ದಾಳಿ ನಡೆಸಿದ ಬೈಂದೂರು ಪೊಲೀಸರು ಪಟಾಕಿ ವಶಪಡಿಸಿಕೊಂಡ ಘಟನೆ ಬುಧವಾರ ಬೈಂದೂರು ತಾಲೂಕಿನ ಉಪ್ಪುಂದದ ಕಂಚಿಕಾನ್ ಎಂಬಲ್ಲಿ ನಡೆದಿದೆ. ಇಲ್ಲಿನ ದತ್ತಾತ್ರೇಯ ಶೇಟ್ ಎಂಬಾತ ಪಟಾಕಿ ಅಕ್ರಮ ದಾಸ್ತಾನು ಮಾಡಿಟ್ಟುಕೊಂಡ ಆರೋಪಿಯಾಗಿದ್ದಾನೆ. ಇವರ ಪಟಾಕಿ ದಾಸ್ತಾನು ಶೆಡ್ ಸಮೀಪವೇ ಕಾಂಕ್ರೀಟ್ ರಸ್ತೆ ಇದ್ದು, ಕೆಲವು ಸಮಯಗಳ ಹಿಂದೆ ರಸ್ತೆ ಮಧ್ಯೆಯೇ ಕೆಂಪು ಕಲ್ಲಿನ ಕಂಪೌಂಡ್ ನಿರ್ಮಿಸಿದ್ದರು.

ಈ ಬಗ್ಗೆ ಸ್ಥಳೀಯರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರೂ ಆರೋಪಿ ದತ್ತಾತ್ರೇಯ ಶೇಟ್ ಕ್ಯಾರೇ ಎಂದಿರಲಿಲ್ಲ. ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಇಂಜಂಕ್ಷನ್ ದೊರೆತ ಮೇಲೂ ದತ್ತಾತ್ರೇಯ ಶೇಟ್ ಮತ್ತೆ ಕಂಪೌಂಡ್ ಕಟ್ಟಲು ಯತ್ನಿಸಿದಾಗ ಸಾರ್ವಜನಿಕರೇ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗೆ ನ್ಯಾಯಾಲಯದ ಆದೇಶ ಪಾಲಿಸುವಂತೆ ಎಚ್ಚರಿಕೆ ನೀಡಿದ್ದರು. ಅಕ್ರಮ ದಾಸ್ತಾನಿರಿಸಲಾಗಿದ್ದ ಸುಮಾರು ನಾಲ್ಕು ಲಕ್ಷಕ್ಕೂ ಮಿಕ್ಲಿ ಮೌಲ್ಯದ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Also Read  ಪುತ್ತೂರು: ಚರಂಡಿಯ ಮೇಲ್ಭಾಗದ ಪೈಪ್‌ ನಲ್ಲಿ ಸಿಲುಕಿದ ಮಹಿಳೆ; ರಕ್ಷಣೆ

error: Content is protected !!
Scroll to Top