ಅತೀ ವೇಗ ಚಾಲನೆ: ಖಾಸಗಿ ಬಸ್ಸೊಂದರ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ)newskadaba.com, . 09 ಮಂಗಳೂರು: ಮಂಗಳೂರಿನಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದರ ಧಾವಂತಕ್ಕೆ ಕಾರಣಮಾಗಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ ಅವರು ಬಸ್ಸನ್ನು ಸ್ವಾಧೀನ ಪಡೆದಿದ್ದಾರೆ. ಮಂಗಳೂರು – ಮೂಡಬಿದ್ರೆ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ KA 19 AB 1339 ಸಂಖ್ಯೆಯ ಜೈನ್ ನಾಮಾಂಕಿತದ ಖಾಸಗಿ ಬಸ್ಸನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಾಲಯಿಸಿ ಮತ್ತೊಂದು ಖಾಸಗಿ ಬಸ್ಸನ್ನು ಓವರ್ ಟೇಕ್ ಮಾಡಿದ್ದನು.

Also Read  'ಮಾದಕ ವಸ್ತುಗಳ ದಂಧೆ ನಿಗ್ರಹಿಸುವುದು ಸರ್ಕಾರದ ಗುರಿ' - ಸಿಎಂ

ಚಾಲಕನ ಅಜಾಗರೂಕತೆಯ ಚಾಲನೆಯು ಪ್ರಯಾಣಿಕರಿಗೆ ಮಾತ್ರವಲ್ಲ ರಸ್ತೆಯಲ್ಲಿ ಹೋಗುತ್ತಿದ್ದವರ ಎದೆ ಝಲ್ಲೆನಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ನಾಮಾಂಕಿತದ ಖಾಸಗಿ ಬಸ್ಸಿನ ಚಾಲಕ ಮೂಡುಬಿದಿರೆ ತೋಡಾರು ನಿವಾಸಿ ಮಹಮ್ಮದ್ ಇಸ್ಮಾಯಿಲ್ (32) ವಿರುದ್ಧ ಮೂಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top