2025ನೇ ಫೆಬ್ರವರಿ 18 ರಿಂದ 23ರ ತನಕ ಕುಂತೂರು-ಬೇಳ್ಪಾಡಿ ದರ್ಗಾ ಶರೀಫ್ ಉರೂಸ್ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09. ಸುಮಾರು 200 ವರ್ಷಗಳ ಇತಿಹಾಸವಿರುವ ಕುಂತೂರು-ಬೇಳ್ಪಾಡಿ ದರ್ಗಾ ಶರೀಫ್ ಎ.ಬಿ  ಜುಮ್ಮಾ ಮಸೀದಿಯ ಆಡಳಿತಕ್ಕೆ ಒಳಪಟ್ಟಿದ್ದು ಇಲ್ಲಿ ಮೂರು  ವರ್ಷಕ್ಕೊಮ್ಮೆ ನಡೆಯುವ ಅದ್ಧೂರಿ  ಉರೂಸ್ ಸಮಾರಂಭ 2025 ನೇ ಫೆಬ್ರವರಿ 18 ರಿಂದ 23 ತನಕ ಕುಂತೂರು-ಬೇಳ್ಪಾಡಿ ದರ್ಗಾ ಶರೀಫ್ ನ ವಠಾರದಲ್ಲಿ ನಡೆಯಲಿದೆ ಎಂದು ಉರೂಸ್ ಮಾರಂಭದ ವಕ್ತಾರ ಅಬ್ಬಾಸ್ ಕುಂತೂರು ಹೇಳಿದರು.

ಅವರು  ಕಡಬದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನವರಿ ಫೆಬ್ರವರಿ ತಿಂಗಳಲ್ಲಿ ಎಲ್ಲಾ ಕಡೆ ಊರೂಸ್‌ಗಳನ್ನು ಆಯೋಜಿಸಲಾಗುತ್ತದೆ. ಹಾಗಾದಾಗ ಜಿಲ್ಲೆಯಲ್ಲೇ ದೊಡ್ಡ ಮಟ್ಟದಲ್ಲಿ ನಡೆಯುವ ಬೇಳ್ಪಾಡಿ ಉರೂಸ್‌ಗೆ ಬರುವವರಿಗೆ ತೊಂದರೆಯಾಗುತ್ತದೆ. ನಮ್ಮಲ್ಲಿಯ ಕಾರ್ಯಕ್ರಮದ ದಿನಾಂಕ ಮೊದಲೇ ಘೋಷಿಸಿದರೆ ಇನ್ನುಳಿದ ಉರೂಸ್ ಸಮಾರಂಭ ನಡೆಸುವವರಿಗೆ ದಿನ ನಿಗದಿ ಮಾಡಲು ಅನುಕೂಲವಾಗುತ್ತದೆ ಎಂದರು.

ಬೇಳ್ಪಾಡಿಯಲ್ಲಿ ಒಟ್ಟು 6 ದಿನಗಳ ಕಾರ್ಯಕ್ರಮಗಳು ನಡೆಯಲಿದ್ದು ಪ್ರತಿದಿನ ಪ್ರಭಾಷಣಗಳು, ಶಾದುಳಿ ರಾತೀಬುಗಳು, ಮಜ್ಲಿಸ್‌ನ್ನೂರ್‌ಗಳು, ಕವಾಲಿಗಳು, ದಪ್ಪುಗಳು, ಹಾಗೂ ಧಾರ್ಮಿಕ ಚೌಕಟ್ಟಿನೊಳಗೆ ಇರುವ ಇತರೇ ಕಾರ್ಯಕ್ರಮಗಳು ವಿಭಿನ್ನ ಶೈಲಿಯಲ್ಲಿ ನಡೆಯಲಿರುವುದು.

Also Read  ರಂಜಾನ್ ಉಪವಾಸ ಮತ್ತು ಆರೋಗ್ಯದ ಕಾಳಜಿ - ಡಾ|| ಮುರಲೀ ಮೋಹನ್ ಚೂಂತಾರುರವರ ಲೇಖನ

ಈ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ವಾಕ್‌ಚಾತುರ್ಯದಲ್ಲಿ  ಪ್ರಾವಿಣ್ಯತೆ  ಪಡೆದ ಮತಪಂಡಿತರು, ,ಸೂಫಿವರ್ಯರು,  ಸಾದಾತುಗಳು, ಉಲಮಾ ಶಿರೋಮಣಿಗಳು ಭಾಗವಹಿಸಲಿರುವರು.  ಕಾರ್ಯಕ್ರಮದ ಕೊನೆಯ ದಿನ ಅದ್ಧೂರಿ ಉರೂಸ್ ಸಮಾರಂಭ ನಡೆಯಲಿದ್ದು ಆಲಂಕಾರಿನಿಂದ ಕುಂತೂರು ಬೇಳ್ಪಾಡಿ ತನಕ ಅರಬಿಕ್ ಸ್ಕೂಲ್ ವಿಧ್ಯಾರ್ಥಿಗಳಿಂದ  ಆಕರ್ಷಕ  ಮೆರವಣಿಗೆ-ದಪ್ಪುಗಳಿಂದ ಕೂಡಿದ ಹಾಡು ಇತ್ಯಾದಿ ಕಾರ್ಯಕ್ರಮವಿರುತ್ತದೆ.  ಅಲ್ಲದೇ ರಾಜಕೀಯ ಸಾಮಾಜಿಕ ಧಾರ್ಮಿಕ ನೇತಾರರು ಭಾಗವಹಿಸಲಿದ್ದು, 10 ಸಾವಿರಕ್ಕಿಂತಲೂ ಮಿಕ್ಕಿ ಬರುವ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಅಬ್ಬಾಸ್ ಕೋರಿದರು.

ಸಾವಿರಾರು ಜನರ ರೋಗರುಜಿನಗಳಿಗೆ ಪರಿಹಾರವನ್ನು ಕಂಡುಕೊoಡ ಕುಂತೂರು-ಬೇಳ್ಪಾಡಿ ದರ್ಗಾಶರೀಫ್ ಮಸೀದಿಯಲ್ಲಿ  ಸರ್ವಜನಾಂಗದವರು ಹರಕೆ ಹೊತ್ತು ತನ್ನ ಇಷ್ಟಾರ್ಥವನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇಲ್ಲಿನ  ಬಹುಮುಖ್ಯ ಹರಕೆ ಎಂದರೆ- ಬೆಳ್ತಕ್ಕಿ ಮತ್ತು ಬೆಲ್ಲ, ಸಕ್ಕರೆ. ಹಾಗಾಗಿ  ಇಲ್ಲಿ ಬೆಲ್ಲದ ಗಂಜಿಗೆ ಪ್ರಸಿದ್ದವಾಗಿದೆ ಪ್ರತಿದಿನ ಬರುವ ಭಕ್ತಾದಿಗಳಿಗೆ ಬೆಲ್ಲದ ಗಂಜಿ  ಇರುತ್ತದೆ ಎಂದು ಅಬ್ಬಾಸ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ  ಬೇಳ್ಪಾಡಿ ಮಸೀದಿಯ ಅಧ್ಯಕ್ಷ ಹಸೈನಾರ್ ಹಾಜಿ ಜಾಲ್ಕರೆ, ಉಪಾಧ್ಯಕ್ಷ ಅಯೂಬ್ ಯು.ಕೆ. ಪೂಂಜ, ಕಾರ್ಯದರ್ಶಿ ಯಾಕೂಬ್ ಕೋಚಕಟ್ಟೆ, ಕೋಶಾಧಿಕಾರಿ ಅಬ್ದುಲ್ಲಾ ಮುಡುಪಿನಡ್ಕ ಉಪಸ್ಥಿತರಿದ್ದರು.

error: Content is protected !!
Scroll to Top