(ನ್ಯೂಸ್ ಕಡಬ)newskadaba.com, ಅ. 09 ಬೆಂಗಳೂರು: ಹಳಸಿದ ಆಹಾರ ಸೇವಿಸಿ 5 ವರ್ಷದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂದಿಸಿದಂತೆ ಕೆಪಿ ಅಗ್ರಹಾರ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಆಹಾರ ಸೇವಿಸಿದ ಬಾಲಕನ ಪೋಷಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮೂವರಿಗೂ ಪದೇ ಪದೇ ವಾಂತಿ ಮತ್ತು ಬೇಧಿ ಕಾಣಿಸಿಕೊಂಡಿದೆ. ಮೂವರು ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಬಾಲಕ ಧೀರಜ್ (5) ಮೃತಟ್ಟಿರುವುದಾಗಿ ತಿಳಿಸಿದ್ದಾರೆ.
Also Read ಕುತ್ತಾರು :ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಅಪಘಾತ ನಡೆಸಿ, ಚೂರಿಯಿಂದ ಇರಿದ ದುಷ್ಕರ್ಮಿಗಳು.?!