(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 09. ಹಾಲಿನ ಬೆಲೆ ಏರಿಕೆ ಜೊತೆಗೆ ಕಾಫಿ ಪುಡಿ ಬೆಲೆಯೂ ಹೆಚ್ಚಾಗುತ್ತಿದ್ದು, ಕಾಫಿ ಪ್ರಿಯರಿಗೆ ಕಹಿ ಅನುಭವವಾಗತೊಡಗಿದೆ. ಅ. 15ರಿಂದ ಪ್ರತೀ ಕೆಜಿ ಕಾಫಿ ಪುಡಿ ಮೇಲೆ 100 ರೂ. ದುಬಾರಿಯಾಗಲಿದೆ.
ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಶನ್ (ಐಸಿಟಿಎ) ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಕರ್ನಾಟಕದಲ್ಲಿ 300 ನೋಂದಾಯಿತ ಕಾಫಿ ರೋಸ್ಟರ್‌ಗಳು ಮತ್ತು ದಕ್ಷಿಣ ಭಾರತದಲ್ಲಿ ಸುಮಾರು 500 ಕಾಫಿ ರೋಸ್ಟರ್‌ಗಳಿದ್ದಾರೆ. ಅಲ್ಲದೆ, 3,000 ನೋಂದಾಯಿತ ಕಾಫಿ ವ್ಯಾಪಾರ ಘಟಕಗಳಿವೆ. ಕಾಫಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೋಂದಣಿಯಾಗದ ಘಟಕಗಳು ಹಾಗೂ ಗುಣಮಟ್ಟವಿಲ್ಲದ ಕಾಫಿ ಮಾರಾಟ ಮಾಡುವವರಿಗೆ ಐಸಿಟಿಎ ಕಠಿಣ ಎಚ್ಚರಿಕೆ ನೀಡಿದೆ.