ಆರ್ ಜಿ ಕರ್ ಆಸ್ಪತ್ರೆಯ 50 ವೈದ್ಯರ ಸಾಮೂಹಿಕ ರಾಜೀನಾಮೆ

(ನ್ಯೂಸ್ ಕಡಬ)newskadaba.com ಕೊಲ್ಕತ್ತಾ, ಅ. 09. ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ನಡೆದ ಇಲ್ಲಿನ ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಆಮರಣ ಉಪವಾಸ ಕೈಗೊಂಡಿರುವ ಏಳು ಮಂದಿ ಕಿರಿಯ ವೈದ್ಯರಿಗೆ ಬೆಂಬಲಾರ್ಥವಾಗಿ ಆಸ್ಪತ್ರೆಯ 50 ಮಂದಿ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಆಮರಣ ಉಪವಾಸ ಕೊನೆಗೊಳಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ತರುವ ಉದ್ದೇಶದಿಂದ 50ಕ್ಕೂ ಹೆಚ್ಚು ವೈದ್ಯರು ಈ ನಿರ್ಧಾರಕ್ಕೆ ಬಂದಿದ್ದಾರೆ. “ಈ ಸಾಂಕೇತಿಕ ಕ್ರಮದಿಂದ ಒಂದು ಹೆಜ್ಜೆ ಮುಂದೆ ಹೋಗಿ ನಾವು ವೈಯಕ್ತಿಕವಾಗಿ ರಾಜೀನಾಮೆ ಸಲ್ಲಿಸಲು ಸಿದ್ಧ” ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Also Read  ಕಡಬ ತಾಲೂಕು ಆಡಳಿತ ವತಿಯಿಂದ  ಸ್ವಾತಂತ್ರೊತ್ಸವ ಆಚರಣೆ ಹಿನ್ನೆಲೆ - ತಹಸೀಲ್ದಾರ್ ಕಛೇರಿಯಲ್ಲಿ ಪೂರ್ವಭಾವಿ ಸಭೆ

 

error: Content is protected !!
Scroll to Top