ತಿರುಪತಿ-ಉಡುಪಿ ನಡುವೆ ನೇರ ರೈಲು ಸಂಚಾರಕ್ಕೆ ಚಾಲನೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಅ. 09. ತಿರುಪತಿ ಮತ್ತು ಉಡುಪಿ ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಉಡುಪಿ ಸಂಸದರ ಅವಿರತ ಪ್ರಯತ್ನದಿಂದ ನನಸಾಗಿದ್ದು, ಹೈದರಾಬಾದ್ ಮಹಾನಗರಿಯ ಜತೆಯೂ ಈ ಮೂಲಕ ರೈಲು ಸೇವೆ ಆರಂಭವಾಗಿದೆ.

ಬುಧವಾರ ಮತ್ತು ಶನಿವಾರ ಸಂಜೆ 5ಕ್ಕೆ ಕುಂದಾಪುರ ಉಡುಪಿ ಮಾರ್ಗದ ಮೂಲಕ ಹೊರಡುವ ರೈಲು ಮರುದಿನ ಬೆಳಿಗ್ಗೆ 11ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣದ ಮೂಲಕ ಹೈದರಾಬಾದಿನ ಕಾಚಿಗುಡ ತಲುಪಲಿದೆ.ಕಳೆದ ಒಂದು ದಶಕದಿಂದ ಕುಂದಾಪುರ ರೈಲು ಸಮಿತಿಯು ಈ ಬಗ್ಗೆ ನಿರಂತರ ಪ್ರಯತ್ನಿಸುತಿದ್ದ ಹಿನ್ನೆಲೆಯಲ್ಲಿ ಸಂಸದನಾಗಿ ಆಯ್ಕೆಯಾದ ಮೊದಲ ನೂರು ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಈ ಮಹತ್ವಾಕಾಂಕ್ಷೆಯ ರೈಲು ಸೇವೆಯ ಗುರಿಯನ್ನು ಹೊಂದಿರುವುದಾಗಿ ಸಂಸದರು ತಿಳಿಸಿದ್ದರು.

Also Read  ಸೇತುವೆಯಿಂದ ಉರುಳಿ ಬಿದ್ದ ಬಸ್ ➤ 15 ಜನರು ಮೃತ್ಯು

 

error: Content is protected !!
Scroll to Top