ಮಾದಕ ದ್ರವ್ಯ ದಂಧೆ: ಸೆಪ್ಟೆಂಬರೆನಲ್ಲಿ 67 ಜನರ ಬಂಧನ

(ನ್ಯೂಸ್ ಕಡಬ)newskadaba.com,. 08.ಬೆಂಗಳೂರು:  ಬೆಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ಕಳೆದ ತಿಂಗಳು ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿಯರು ಸೇರಿದಂತೆ 67 ಮಂದಿಯನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಂಗಳವಾರ ತಿಳಿಸಿದ್ದಾರೆ.

ನಗರದಲ್ಲಿ ಡ್ರಗ್ಸ್ ದಂಧೆ, ಮಾದಕ ದ್ರವ್ಯ ಸಾಗಣೆ ಅಥವಾ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಅಪರಾಧಿಗಳನ್ನು ಗುರುತಿಸಲು ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲು ನಗರದ ಪ್ರತಿಯೊಂದು ಭಾಗದಲ್ಲೂ ದಾಳಿ ನಡೆಸಲಾಗುವುದು ಎಂದು ಅವರು ಹೇಳಿದರು.ಸೆಪ್ಟೆಂಬರ್‌ನಲ್ಲಿ, ನಗರ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ 40 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಸುಮಾರು 67 ಜನರನ್ನು ಬಂಧಿಸಿದ್ದಾರೆ, ಅದರಲ್ಲಿ ಮೂವರು ವಿದೇಶಿಗರಿದ್ದಾರೆ. ಬಂಧಿತರಿಂದ 170 ಕೆಜಿ ಗಾಂಜಾ, 2 ಕೆಜಿ ಅಫೀಮು, 13 ಗ್ರಾಂ ಕೊಕೇನ್, 372 ಗ್ರಾಂ ‘ಎಂಡಿಎಂಎ’ ಮತ್ತು 998 ‘ಎಕ್ಸ್ಟಸಿ’ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

Also Read  ಜು.5 ರಿಂದ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಫಿಕ್ಸ್ ➤ ಸರ್ಕಾರದಿಂದ ಅಧಿಕೃತ ಆದೇಶ..!

error: Content is protected !!
Scroll to Top