(ನ್ಯೂಸ್ ಕಡಬ)newskadaba.com, ಅ. 08.ನವದೆಹಲಿ: 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಾನ್ ಜೆ. ಹಾಪ್ಫೀಲ್ಡ್ಮತ್ತು ಜೆಫ್ರಿ ಇ. ಹಿಂಟನ್ ಅವರಿಗೆ ಘೋಷಿಸಲಾಗಿದೆ. ಕೃತಕ ನರ ಜಾಲಗಳೊಂದಿಗೆ ಯಂತ್ರ ಕಲಿಕೆಯನ್ನು ಸಕ್ರಿಯಗೊಳಿಸುವ ಆವಿಷ್ಕಾರಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಪ್ರಕಟಿಸಿದೆ. ಜಾನ್ ಜೆ. ಹಾಪ್ಫೀಲ್ಡ್ ಅಮೆರಿಕ ಮೂಲದವರಾಗಿದ್ದು, ʼಗಾಡ್ ಫಾದರ್ ಆಫ್ ಎಐʼ ಎಂದು ಕರೆಯಲ್ಪಡುವ ಜಾನ್ ಜೆ. ಹಾಪ್ಫೀಲ್ಡ್ ಇಂಗ್ಲೆಂಡ್ ಮೂಲದವರು.
ಕಳೆದ ವರ್ಷ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ತಂತ್ರಜ್ಞಾನಕ್ಕೆ ಅಗತ್ಯವಾದ ಪರಮಾಣುಗಳ ಪ್ರಮುಖ ಭಾಗವಾದ ಎಲೆಕ್ಟ್ರಾನ್ಗಳೊಂದಿಗಿನ ಆವಿಷ್ಕಾರಕ್ಕಾಗಿ ಭೌತಶಾಸ್ತ್ರಜ್ಞರಾದ ಆ್ಯನಿ ಎಲ್ ಹುಲಿಯರ್, ಪಿಯರೆ ಅಗೋಸ್ಟಿನಿ ಮತ್ತು ಫೆರೆಂಕ್ ಕ್ರೌಜ್ ಅವರಿಗೆ 2023ರ ಪ್ರಶಸ್ತಿ ನೀಡಲಾಗಿತ್ತು.