”ಬಿಗ್ ಬಾಸ್ ಶೋ” ಗೆ ಶಾಕ್ ನೀಡಿದ ಮಹಿಳಾ ಆಯೋಗ

(ನ್ಯೂಸ್ ಕಡಬ)newskadaba.com,. 08.ಬೆಂಗಳೂರು: ಖಾಸಗಿ ವಾಹಿನಿ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮಹಿಳಾ ಆಯೋಗ ಬಿಗ್ ಶಾಕ್ ನೀಡಿದೆ. ಬಿಗ್ಬಾಸ್ನಲ್ಲಿ ಭಾಗವಹಿಸಿರುವ ಸ್ಪರ್ಧಾಳು ಮಹಿಳೆಯರಿಗೆ ಊಟ ಮತ್ತು ಶೌಚಾಲಯ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಬಿಗ್ಬಾಸ್ ಮನೆಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದರು.

ಬಿಗ್ ಬಾಸ್ ಮನೆಗೆ ಎಂಟ್ರಿ ಆಗದಂತೆ ಮಹಿಳಾ ಆಯೋಗಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ಮನವಿ ಮಾಡಕೊಂಡಿದ್ದು ನಾವೇ ನಿಮ್ಮ ಕಚೇರಿಗೆ ಬಂದು ಉತ್ತರ ನೀಡುತ್ತೇವೆ ಎಂದು ಕೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ಊಟದ ವಿಚಾರದಲ್ಲಿನ ತಾರತಮ್ಯ ಹಾಗೂ ಶೌಚಾಲಯದ ಸಮಸ್ಯೆಗಳನ್ನು ಬಗೆಹರಿಸುತ್ತೆವೆ ಎಂದು ಆಯೋಜಕರು ಭರವಸೆ ನೀಡಿದ್ದಾರೆ.

Also Read  ?? ?ig Breaking News ಕಡಬದಲ್ಲಿ ಮತ್ತೆ ವಕ್ಕರಿಸಿದ ಕೊರೋನಾ ➤ ರೈಲ್ವೇ ಉದ್ಯೋಗಿಯಲ್ಲಿ ಕೊರೋನಾ ದೃಢ

error: Content is protected !!
Scroll to Top