ಪೇಜಾವರ ಶ್ರೀಯವರ ಇಫ್ತಾರ್ ವಿವಾದ ► ಪ್ರವೀಣ್ ವಾಲ್ಕೆಯವರ ಆಕ್ರೋಶಿತ ಮಾತು

(ನ್ಯೂಸ್ ಕಡಬ) newskadaba.com ಮಂಗಳೂರು, ಜು.01. ನಾವು ಸೌಹಾರ್ದತೆಯಲ್ಲಿರಬೇಕೆಂದು 50 ವರ್ಷಗಳ ಮೊದಲು ಗೊತ್ತಾಗಿರುತ್ತಿದ್ದರೆ ಇವತ್ತಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇಷ್ಟೊಂದು ಗೊಂದಲಗಳಾಗುತ್ತಿರಲಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ನಾವು ಪೇಜಾವರ ಶ್ರೀ ಯವರ ಮಾರ್ಗದರ್ಶನದಲ್ಲಿ ಮುಂದುವರಿದಿದ್ದೆವು. ಅಂದೇ ನಾವೆಲ್ಲ ಮುಸ್ಲಿಮರೊಂದಿಗೆ ಸೌಹರ್ದಯುತವಾಗಿ ಇರೋಣ ಎಂದು ಸ್ವಾಮೀಜಿ ಹೇಳಿದ್ದರೆ, ನಾವೂ ಅನ್ಯೋನ್ಯವಾಗಿ ಇರುತ್ತಿದ್ದೆವು. ಆದರೆ, ನಮ್ಮ ಮನಸ್ಸಿನಲ್ಲಿ ವಿಷಬೀಜ ಬಿತ್ತಿ, ತಾವು ಗುಟ್ಟಾಗಿ ಮುಸ್ಲಿಮರ ಪ್ರೀತಿಗಳಿಸಲು ಮುಂದಾಗಿರುವುದು ಎಷ್ಟು ಸರಿ.

ನಮಗೆ ಮುಸ್ಲಿಮರು ವಿರೋಧಿಗಳಲ್ಲ. ಈ ಕೆಲಸವನ್ನು ಶ್ರೀಗಳು ಐವತ್ತು ವರ್ಷಗಳ ಹಿಂದೆಯೇ ಮಾಡಿದ್ದರೆ ಈಗ ಹಿಂದು ಮುಸ್ಲಿಮರ ನಡುವೆ ಇರುವ ದ್ವೇಷಕಾರುವ ಸ್ಥಿತಿ ಇರುತ್ತಿರಲಿಲ್ಲ. ನಮ್ಮ ಸುತ್ತ ಮುತ್ತ ಮುಸ್ಲಿಮರಿದ್ದಾರೆ. ನಾವೂ ಕೂಡ ಮುಸ್ಲಿಮರ ಜತೆ ಉತ್ತಮ ಭಾಂದವ್ಯ ಬಯಸುತ್ತೇವೆ. ನಮಗೂ ಇಫ್ತಾರ್ ಕೂಟ ಮಾಡುವ ಆಸೆ ಇದೆ. ಆದರೆ ಈಗ ಅಂತಹ ವಾತಾವರಣ ಇಲ್ಲ. ಪರಸ್ಪರ ಅಪನಂಬಿಕೆ, ದ್ವೇಷ ಇದೆ. ಇದಕ್ಕೆಲ್ಲ ಕಾರಣ ನಮಗೆ ಮಾರ್ಗದರ್ಶನ ಮಾಡಿದ ಶ್ರೀಗಳು. ಈಗ ಶ್ರೀಗಳು ಇಫ್ತಾರ್ ಕೂಟ ಮಾಡಿ ನಮ್ಮನ್ನು ದಾರಿ ತಪ್ಪಿಸಿದ್ದಾರೆ. ನಾವು ಅವರನ್ನು ನಂಬಿ ಮೋಸಹೋಗಿದ್ದೇವೆ.

Also Read  ➤ ಭೂಕಂಪ ಪೀಡಿತ ಟರ್ಕಿಯಲ್ಲಿ ಬೆಂಗಳೂರು ಮೂಲದ ಟೆಕಿ ನಾಪತ್ತೆ!

ಹೀಗೆಂದು ಹೇಳಿದವರು ಮಂಗಳೂರಿನ ಬಜರಂಗ ದಳದ ಸ್ಥಾಪಕ ಮುಖಂಡ, ಶ್ರೀ ರಾಮ ಸೇನೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ. ಬನ್ನಿ ಅವರ ಮಾತುಗಳಲ್ಲಿನ ಆಕ್ರೋಶವನ್ನು ಕೇಳೋಣ

 

 

error: Content is protected !!
Scroll to Top