​ಟಿಕೆಟ್ ಬುಕಿಂಗ್‌ನಲ್ಲಿ ಸಂಚಲನ ಸೃಷ್ಟಿಸಿದ ರಜನಿ ಚಿತ್ರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 08. ಬಿಡುಗಡೆಗೂ ಮುನ್ನವೇ ರಜನಿಕಾಂತ್ ಅಭಿನಯದ ವೆಟ್ಟೆಯನ್ ಚಿತ್ರ ಸಂಚಲನ ಸೃಷ್ಟಿಸಿದೆ.ವೆಟ್ಟೈಯನ್ ಚಿತ್ರದ ಟಿಕೆಟ್ಗಳಿಗಾಗಿ ಜನರು ಮುಗಿಬಿದ್ದಿದ್ದು ಬೆಂಗಳೂರು ಮತ್ತು ಚೆನ್ನೆ ಮತ್ತಿತರ ನಗರಗಳಲ್ಲಿ ಆನ್ಲೈನ್ ಮೂಲಕ ತಮ್ಮ ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ.

ದೇಶದಾದ್ಯಂತ ಈಗಾಗಲೇ ಸುಮಾರು 3.5 ಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ. ತಮಿಳುನಾಡು, ಕರ್ನಾಟಕ ಮತ್ತು ಅದರಾಚೆಯೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 6.5 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಟಿಕೆಟ್ ಮಾರಾಟ ಮಾಡಲಾಗಿದೆ. ತಮಿಳುನಾಡಿನಲ್ಲಿ 2.51 ಕೋಟಿ ರೂ.ಮೌಲ್ಯದ ಟಿಕೆಟ್ ಮಾರಾಟವಾಗಿದ್ದರೆ, ಕರ್ನಾಟಕದಲ್ಲಿ 2.27 ಕೋಟಿ ರೂ.ಗಳಷ್ಟು ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.

Also Read  ಈ 8 ರಾಶಿಯವರಿಗೆ ವಿವಾಹ ಯೋಗ. ಕಂಕಣ ಪ್ರಾಪ್ತಿ. ಕುಟುಂಬದಲ್ಲಿನ ಕಲಹಗಳು ನಿವಾರಣೆಯಾಗುತ್ತದೆ

 

error: Content is protected !!
Scroll to Top