​ಕೊಟ್ಟ ಮಾತು ಉಳಿಸಿಕೊಂಡ ಕೆಎಲ್ ರಾಹುಲ್

(ನ್ಯೂಸ್ ಕಡಬ)newskadaba.com ಹುಬ್ಬಳ್ಳಿ, ಅ. 08. ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಅವರು ತಮ್ಮನ್ನು ಚಾರಿಟಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಲವರಿಗೆ ನೆರವಾಗಿದ್ದಾರೆ. ಬಾಗಲಕೋಟೆಯ ವಿದ್ಯಾರ್ಥಿ ಅಮೃತ್ ಮಾವಿನಕಟ್ಟೆ ಅವರ ದ್ವಿತೀಯ ವರ್ಷದ ಕಾಲೇಜ್ ಫೀಸ್ ಭರಿಸುವ ಮೂಲಕ ರಾಹುಲ್ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ನಿವಾಸಿ ಅಮೃತ್ ಮಾವಿನಕಟ್ಟಿ ಅವರು ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿರುವ ಕೆಎಲ್‌ಇ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಬಿ.ಕಾಮ್ ಪದವಿ ವ್ಯಾಸಂಗ ಮಾಡಿತ್ತಿದ್ದಾರೆ. ಅಮೃತ್ ಅವರ ಪ್ರಥಮ ವರ್ಷದ ಸಂಪೂರ್ಣ ಕಾಲೇಜ್ ಫೀಸ್ ಅನ್ನು ಕೆಎಲ್ ರಾಹುಲ್ ಭರಿಸಿದ್ದರು. ಇದೀಗ ದ್ವಿತೀಯ ವರ್ಷದ ಕಾಲೇಜ್ ಫೀಸ್ ಅನ್ನು ಕೂಡ ರಾಹುಲ್ ಭರಿಸಿದ್ದಾರೆ.

Also Read  ಧೋನಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ 16 ವರ್ಷದ ಯುವಕ ಬಂಧನ

 

error: Content is protected !!
Scroll to Top