(ನ್ಯೂಸ್ ಕಡಬ)newskadaba.com ಮಂಗಳೂರು, ಅ. 08. ಭಾರತೀಯ ಹಜ್ ಕಮಿಟಿ ಮೂಲಕ 2025ರಲ್ಲಿ ಹಜ್ ಯಾತ್ರೆ ಕೈಗೊಳ್ಳಲು ರಾಜ್ಯ ಹಜ್ ಸಮಿತಿ ಮೂಲಕ ಅರ್ಜಿ ಸಲ್ಲಿಸಿದವರ ಪೈಕಿ ಆಯ್ಕೆಯಾದ ಯಾತ್ರಿಕರ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದೆ.
ಆಯ್ಕೆಯಾದ ಎಲ್ಲಾ ಯಾತ್ರಿಕರು ಆರಂಭದಲ್ಲಿ ಮುಂಗಡ ಹಜ್ ಮೊತ್ತ ರೂ.1,28,000, ಮರುಪಾವತಿಸಲಾಗದ ಸಂಸ್ಕರಣಾ ಶುಲ್ಕ 300 ರೂ. ಮತ್ತು ಇತರ ವೆಚ್ಚಗಳಿಗೆ 2,000 ರೂ. ಸೇರಿದಂತೆ ಒಟ್ಟು 1,30,300 ರೂ.ಗಳನ್ನು 2024 ಅಕ್ಟೋಬರ್ 8 ರಿಂದ ಅ.21ರೊಳಗಾಗಿ ಪಾವತಿಸಬೇಕಾಗಿದೆ. 1,30,300 ರೂ. ಠೇವಣಿ ಪಾವತಿ ವಿವರವನ್ನು https://hajcommittee.gov.in ಅಥವಾ Suvidha App ಮೂಲಕ ಪಡೆಯಬಹುದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ ಠೇವಣಿಯನ್ನು ಪಾವತಿಸಬಹುದಾಗಿದೆ.
