(ನ್ಯೂಸ್ ಕಡಬ)newskadaba.com ಉಡುಪಿ, ಅ. 08. ಜಿಲ್ಲೆಯ ಹೆಬ್ರಿ ತಾಲೂಕು ಕಬ್ಬಿನಾಲೆ ವ್ಯಾಪ್ತಿಯ ಬಲ್ಲಾಡಿ ಗುಮ್ಮಗುಂಡಿ ತೋಡು ಹಾಗೂ ಕೆಲಕಿಲ ನದಿಯಲ್ಲಿ ಭಾನುವಾರ ಉಂಟಾದ ಭಾರಿ ಪ್ರವಾಹದಲ್ಲಿ ವೃದ್ದೆಯೊಬ್ಬಳು ಕೊಚ್ಚಿ ಹೋಗಿದ್ದು, ಆಕೆಯ ಮೃತದೇಹ ಸುಮಾರು ಎರಡು ಕಿ.ಮೀ. ದೂರದ ಬಲ್ಲಾಡಿಯ ಅರ್ಧನಾರೀಶ್ವರ ದೇವಸ್ಥಾನದ ಬಳಿ ಸೋಮವಾರ ಪತ್ತೆಯಾಗಿದೆ.
ಮೃತರನ್ನು ಬಲ್ಲಾಡಿ ಬೆಂಡುಗುಡ್ಡೆಯ ಚಂದ್ರು ಗೌಡ್ತಿ (91) ಎಂದು ಗುರುತಿಸಲಾಗಿದೆ. ಬಲ್ಲಾಡಿ ಗುಡ್ಡ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2.30ಕ್ಕೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿದಿತ್ತು. ಇದೇ ವೇಳೆ, ಕಾಂತರಬೈಲು ರಬ್ಬರ್ ತೋಟದಲ್ಲಿ ಆಶ್ರಯ ಪಡೆದಿದ್ದ ಸುಮಾರು 25ಕ್ಕೂ ಹೆಚ್ಚು ಬೀಡಾಡಿ ದನಗಳು ಭಾರಿ ಪ್ರವಾಹಕ್ಕೆ ತುತ್ತಾಗಿ ಕಣ್ಮರೆಯಾಗಿವೆ ಎಂದು ನಿವಾಸಿಗರು ತಿಳಿಸಿದ್ದಾರೆ.