ನಡುಮಜಲು: ಶ್ರೀ ಹೊಸಮ್ಮ‌ ದೇವಿ ಕೊಡಮಣಿತ್ತಾಯ ಮತ್ತು ವಿಷ್ಣುಮೂರ್ತಿ ದೈವಸ್ಥಾನ ► ಇಂದಿನಿಂದ (ಮಾರ್ಚ್ 13 ರಿಂದ 22) ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಮಾ.13. ಮರ್ದಾಳ 102 ನೆಕ್ಕಿಲಾಡಿ ಗ್ರಾಮದ ನಡುಮಜಲು ಶ್ರೀ ಹೊಸಮ್ಮ ದೇವಿ ಕೊಡಮಣಿತ್ತಾಯ ಮತ್ತು ವಿಷ್ಣುಮೂರ್ತಿ ದೈವಸ್ಥಾನದಲ್ಲಿ 1ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ವರ್ಷಾವಧಿ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಇಂದು (ಮಾ.13 ರಿಂದ 22ರ ವರೆಗೆ) ನಡುಮಜಲು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಲಿದೆ.

ಮಾ.13ರಂದು ಪ್ರಾರ್ಥನೆ, ಉಗ್ರಾಣ ಮುಹೂರ್ತ ಹಸಿರು ಹೊರೆಕಾಣಿಕೆ ಸಮರ್ಪಣೆ ಕಲಶ ಪೂಜೆ, ಗಣಪತಿ ಹೋಮ ನಡೆಯಲಿದೆ. ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಬೆಳಿಗ್ಗೆ ಗಂಟೆ 9.30 ರಿಂದ ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು, ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಮಧ್ಯಾಹ್ನ ಗಂಟೆ 12ರಿಂದ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ರಿಂದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.


ಮಾ 14ರಂದು ಸಾಯಂಕಾಲ ಗಂಟೆ 5 ರಿಂದ ಧ್ವಜಾರೋಹಣವಾಗಿ ಬಲಿ ಹೊರಡುವುದು, ಸಂಜೆ ಗಂಟೆ 6ರಿಂದ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಕಡಬ ಗಿರಿವನ ವಾಯ್ಸ್ ರೆಕಾರ್ಡಿಂಗ್ ಸ್ಟುಡಿಯೋ ಕಲಾವಿದರಿಂದ ಭಕ್ತಿ ರಸಮಂಜರಿ ನಡೆಯಲಿದೆ. ಮಾ.15 ರಂದು ಹರಿಸೇವೆ, ಬೈಗಿನಲ್ಲಿ ಬಲಿ, ಸಂಜೆ ಶ್ರೀ ವಾಸುದೇವ ಭಟ್ ಕಡ್ಯ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ರಾತ್ರಿ ಭಂಡಾರವೇರಿ ಹಳ್ಳತ್ತಾಯ ದೈವ, ಪಟ್ಟನ್ ದೈವ ವ್ಯಾಘ್ರ ಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ. ಮಾ.16 ರಂದು ದರ್ಶನ ಬಲಿ ನಡೆದು ಸಾಯಂಕಾಲ ನಡುಮಜಲು ಶ್ರೀ ಮಹಾವಿಷ್ಣು ಭಜನಾ ಮಂಡಳಿ ಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾ.17 ರಂದು ರಾತ್ರಿ ಬಲಿ ಉತ್ಸವ, ಬಾಕಿಮಾರು ಕಟ್ಟೆಪೂಜೆ ಉತ್ಸವ ನಡೆಯಲಿದೆ. ಸಂಜೆ ಮಾಲೇಶ್ವರ ಶ್ರೀ ಮಹಾಬಲೇಶ್ವರ ಮತ್ತು ವೀರಭದ್ರ ಸ್ವಾಮಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಮಾ.18 ರಂದು ಬಲಿ ಹೊರಟು ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ನಡೆಯಲಿದೆ. ದೇವಸ್ಥಾನದಲ್ಲಿ ವಿಶೇಷ ಆಕರ್ಷಣೆ, ಕೀಲು ಕುದುರೆ ನೃತ್ಯ ನಡೆಯಲಿದೆ. ರಾತ್ರಿ ಗಂಟೆ 8 ರಿಂದ ಧ್ವಜಾವರೋಹಣ, ವಿಷ್ಣುಮೂರ್ತಿ ದೈವದ ಭಂಡಾರವೇರಿಸಿ ಒತ್ತೆಕೋಲ ಹಾಗೂ ಪ್ರಾತಃಕಾಲ ಆಂತಕ ದೈವದ ನೇಮೋತ್ಸವ ನಡೆಯಲಿದೆ. ಸಂಜೆ ನೆಟ್ಟಣ ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ಲಕ್ಷಣ ಆಚಾರ್ಯ ಎಡಮಂಗಲ ಹಾಗೂ ಊರ ಮತ್ತು ಪರವೂರ ಕಲಾವಿದರಿಂದ ಶ್ರೀ ಹರಿದರ್ಶನ, ಯಕ್ಷಗಾನ ಬಯಲಾಟ ನಡೆಯಲಿದೆ. ಮಾ. 19 ರಂದು ಕೊಡಮಣಿತ್ತಾಯ ದೈವದ ಭಂಡಾರವೇರಿಸಿ ನೇಮೋತ್ಸವ, ರಾತ್ರಿ ಮರ್ದಾಳ ಶ್ರೀ ಅಯ್ಯಪ್ಪ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾ.20 ರಂದು ರಾತ್ರಿ ಗಂಟೆ 8ರಿಂದ ಹೊಸಮ್ಮನವರ ಭಂಡಾರವೇರಿಸಿ ನೇಮೋತ್ಸವ ನಡೆಯಲಿದೆ. ಸಂಜೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.


ಮಾ. 21 ರಂದು ಪ್ರಾಥಃಕಾಲ 5ರಿಂದ ಶ್ರೀ ಹೊಸಮ್ಮ ದೇವಿಯ ನೇಮೋತ್ಸವದಲ್ಲಿ ಪ್ರಾರ್ಥನೆ, ಹರಕೆ ಸಲ್ಲಿಕೆ, ಪ್ರಸಾದ ವಿತರಣೆ ನಡೆದು ಸಂಜೆ ಮರ್ದಾಳ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಾ.22 ರಂದು ರಾತ್ರಿ ಗಂಟೆ 7ರಿಂದ ಬೇತಾಳಗೆ ನೇಮ ನಡೆಯಲಿದೆ. ರಾತ್ರಿ ಭಂಡಾರವೇರಿಸಿ ಧರ್ಮದೈವ ಕಲ್ಲುರ್ಟಿ, ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ, ಧರ್ಮ ದೈವ ಸ್ಥಳದ ಪಂಜುರ್ಲಿ, ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ. ಸಂಜೆ ಸುಂಕದಕಟ್ಟೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group