ವಾರಂಟ್ ಆರೋಪಿ ಪರಾರಿ: ಆರೋಪಿಯ ಮಾಹಿತಿ ಕೋರಿ ಪೊಲೀಸರ ಮನವಿ

(ನ್ಯೂಸ್ ಕಡಬ)newskadaba.com  ಸುಳ್ಯ, ಅ. 07. ಪ್ರಕರಣವೊಂದರ ವಾರಂಟ್ ಆರೋಪಿಯೋರ್ವ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿರುವ ಆರೋಪಿ ಎಲ್ಲಾದರೂ ಕಂಡುಬಂದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಫೋಟೋ ಸಹಿತ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುಳ್ಯದ ಕಲ್ಲುಗುಂಡಿ ಎಂಬಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ತಮಿಳುನಾಡಿನ ಕೋಳಿ ಕರಣ್ ಎಂಬಾತ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನನ್ನು ಅ. 5ರಂದು ಪೊಲೀಸರು ಬಂಧಿಸಿ ಸುಳ್ಯದ ಕೋರ್ಟ್ ಗೆ ಹಾಜರುಪಡಿಸುವ ಮೊದಲು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಯು ಆಸ್ಪತ್ರೆಯಿಂದಲೇ ತಪ್ಪಿಸಿಕೊಂಡು ಪರಾರಿಯಾಗಿದ್ದ. ಪರಾರಿಯಾಗಿರುವ ಆರೋಪಿ ಎಲ್ಲಾದರೂ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಹಾಗೂ ಆರೋಪಿ ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

Also Read  ಮೂವರು ಹೆಣ್ಣು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ..!   

error: Content is protected !!
Scroll to Top