ವಿಟ್ಲ: ಸೇತುವೆಯಿಂದ ಕೆಳಕ್ಕೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು- ಯುವಕರ ಸಾಹಸಕ್ಕೆ ಸ್ಥಳೀಯರ ಪ್ರಶಂಸೆ

(ನ್ಯೂಸ್ ಕಡಬ)newskadaba.com ಅ. 07. ಸೇತುವೆಯಿಂದ ಕೆಳಗೆ ಬಿದ್ದು, ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯೋರ್ವರನ್ನು ಮೇಲಕೆತ್ತಿ ರಕ್ಷಿಸಿದ ಘಟನೆ ಅ.6ರಂದು ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ನಡೆದಿದೆ.

ಸ್ಥಳೀಯ ನಿವಾಸಿ ಉಮ್ಮರ್ ರವರು ರಕ್ಷಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್ ಸಿ.ಹೆಚ್ ಹಾಗೂ ಸುರೇಶ್ ಸಿಎಚ್ ರಕ್ಷಣೆ ಮಾಡಿದ ಯುವಕರು.ಅ.6ರಂದು ಮಧ್ಯಾಹ್ನದ ಬಳಿಕ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿರುವ ಹಿನ್ನೆಲೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿತ್ತು. ವಿಟ್ಲದ  ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸಾಯಂಕಾಲದ ವೇಳೆ ಉಮ್ಮರ್ ರವರು ಸೇತುವೆಯಿಂದಾಗಿ ಹೋಗುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಇದನ್ನು ಕಂಡ ಯುವಕರಿಬ್ಬರು ನೀರಿನ ಹರಿವನ್ನು ಲೆಕ್ಕಿಸದೆ ನೀರಿಗೆ ದುಮುಕಿ ಸ್ಥಳೀಯರ ಸಹಕಾರದಲ್ಲಿ ಉಮ್ಮರ್ ರವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಯುವಕರ ಸಮಯಪ್ರಜ್ಞೆಗೆ ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸೇತುವೆಗೆ ತಡೆಗೋಡೆ ಇಲ್ಲದಿರುವುದೇ ಅವರು ನೀರಿಗೆ ಬೀಳಲು ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.

Also Read  ಪುಲ್ವಾಮಾ ದಾಳಿ ಕುರಿತು ಅವಹೇಳನಕಾರಿ ಪೋಸ್ಟ್➤ ಇಂಜಿನಿಯರಿಂಗ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ!

 

error: Content is protected !!
Scroll to Top