ಪುತ್ತೂರು: ದ್ವಿತೀಯ ಬಿಎಸ್ಸಿ ಪದವಿ ವಿದ್ಯಾರ್ಥಿ ಮನೋಜ್ ನಾಪತ್ತೆ- ಪೋಲಿಸರಿಗೆ ದೂರು

(ನ್ಯೂಸ್ ಕಡಬ)newskadaba.com ಪುತ್ತೂರು, ಅ. 07. ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಯುವಕ ಕಾಣೆಯಾಗಿರುವುದಾಗಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ನೆಹರು ನಗರದ ಗಣೇಶ್ ಬಾಗ್ ನ ಲಕ್ಷ್ಮೀ ಪ್ರಸಾದ್ ಕಂಪೌಂಡ್ ನಿವಾಸಿ ದಿ.ಕೇಶವ ಮೂರ್ತಿ ಎಂಬುವರ ಪುತ್ರ 20 ವರ್ಷ ಪ್ರಾಯದ ಮನೋಜ್ ಕೆ. ಕಾಣೆಯಾದ ಯುವಕನಾಗಿದ್ದಾನೆ. ಪುತ್ತೂರಿನ ಸಂತ ಫಲೋಮಿನಾ ಕಾಲೇಜಿನಲ್ಲಿ 2ನೆ ವರ್ಷದ ಬಿಎಸ್ಸಿ ಪದವಿಗೆ ಕಲಿಯುತ್ತಿದ್ದ ಮನೋಜ್ ಅ.5ರಂದು ಬೆಳಿಗ್ಗೆ ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ಬಳಿಕ ಮನೆಗೆ ತಿರುಗಿ ಬಂದಿಲ್ಲ. ಸಂಧಿಕರಲ್ಲಿ, ಆಸುಪಾಸಿನಲ್ಲಿ ಮತ್ತು ಸ್ನೇಹಿತರಲ್ಲಿ ವಿಚಾರಿಸಿದರೂ ಮನೋಜ್ ಪತ್ತೆಯಾಗಿಲ್ಲ. ಆತನು ಬಳಸುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಪ್ರಪುಲ್ಲ ಸ್ವಾಮಿ ಪೋಲಿಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಮನೋಜ್ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಲ್ಲಿ ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Also Read  ಮಣಿಪಾಲ ಪೊಲೀಸರಿಂದ ಡ್ರಗ್ ಪೆಡ್ಲರ್ ಬಂಧನ ➤ ರೂ. 4.63 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ

 

error: Content is protected !!
Scroll to Top