ಸೈಬರ್ ವಂಚಕರಿಂದ ಎಚ್ಚರ ವಹಿಸಿ- ಪಿಎಸೈ ಹರೀಶ್ ಆರ್

(ನ್ಯೂಸ್ ಕಡಬ)newskadaba.com ಕುಂದಾಪುರ, ಅ. 07. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು, ವೃತ್ತಿಪರರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದು ಸೈಬರ್ ಅಥವಾ ಆನ್ ಲೈನ್ ನಲ್ಲಿ ವ್ಯವಹರಿಸುವಾಗ ಹೆಚ್ಚು ಎಚ್ಚರದಿಂದ ಇರಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಹರೀಶ್ ಆರ್ ಅವರು ಸಲಹೆ ನೀಡಿದರು.

ಅವರು ಭಾನುವಾರ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಇದರ ಕಥೊಲಿಕ್ ಸಭಾ ಘಟಕ, ಮಾಧ್ಯಮ ಆಯೋಗ ಜಂಟಿಯಾಗಿ ಆಯೋಜಿಸಿದ್ದ ಸೈಬರ್ ಕ್ರೈ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ವಂಚನೆಗೆ ಒಳಗಾಗಿರುವುದು ಗೊತ್ತಾದ ತಕ್ಷಣವೇ, 1930ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ಎನ್ ಸಿ ಆರ್ ಪಿ ಪೋರ್ಟಲ್ ಮೂಲಕ ಕೂಡ ದೂರು ನೀಡಬಹುದು ಎಂದರು.

Also Read  SSLC ಪರೀಕ್ಷೆಗೆ ಸಿದ್ಧತೆ ಪೂರ್ಣ ➤ ಎರಡೂ ಜಿಲ್ಲೆಗಳ ಶಾಲಾ ಆವರಣ ಸ್ಯಾನಿಟೈಸ್

 

error: Content is protected !!
Scroll to Top