(ನ್ಯೂಸ್ ಕಡಬ)newskadaba.com ವಿಟ್ಲ, ಅ. 07. ಉಕ್ಕಿ ಹರಿಯುತ್ತಿದ್ದ ನದಿಗೆ ಆಯತಪ್ಪಿ ಬಿದ್ದ ವೃದ್ಧ ವ್ಯಕ್ತಿಯನ್ನು ಯುವಕರಿಬ್ಬರು ರಕ್ಷಿಸಿರುವ ಘಟನೆ ರವಿವಾರ ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ನಡೆದಿದೆ.
ಉಮ್ಮರ್ (70) ರಕ್ಷಿಸಲ್ಪಟ್ಟ ವ್ಯಕ್ತಿ. ವಿಟ್ಲ ಭಾಗದಲ್ಲಿ ರವಿವಾರ ವ್ಯಾಪಕ ಮಳೆಯಾಗಿದ್ದು, ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ದಾರಿಯಾಗಿ ಸಂಜೆ ವೇಳೆ ಉಮರ್ ಅವರು ಹೋಗುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಸೇತುವೆಗೆ ಯಾವುದೇ ರೀತಿಯ ತಡೆ ಇಲ್ಲದೆ ಇರುವುದು ಇದಕ್ಕೆ ಕಾರಣವೆನ್ನಲಾಗಿದೆ. ಯುವಕರ ಸಮಯಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
