(ನ್ಯೂಸ್ ಕಡಬ)newskadaba.com ಮಂಗಳೂರು, ಅ. 07. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸದೀಯ ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಸಮಿತಿಗೆ ನೇಮಕಗೊಂಡಿರುವ ಕ್ಯಾ. ಚೌಟ ಅವರು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ನೀತಿ-ನಿಯಮಗಳು, ಕಾರ್ಯಯೋಜನೆಗಳ ಬಗ್ಗೆ ಪುನರ್ ಪರಿಶೀಲಿಸುವ ಹಾಗೂ ನಿಗಾ ವಹಿಸುವಲ್ಲಿ ಪಾತ್ರವಹಿಸಲಿದ್ದಾರೆ.