ಕಡಬ ಗಣೇಶ್ ಬಿಲ್ಡಿಂಗ್ ಬಳಿ ವ್ಯಾಪಕ ಅಪಘಾತ: ಹಂಪ್ಸ್ ನಿರ್ಮಿಸುವಂತೆ ಸಾರ್ವಜನಿಕರ ಅಗ್ರಹ ✍️ ಕೆ.ಎಸ್.ಬಾಲಕೃಷ್ಣ ಕೊಯಿಲ

(ನ್ಯೂಸ್ ಕಡಬ)newskadaba.com  ಕಡಬ, ಅ. 05. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯ ಗಣೇಶ್ ಬಿಲ್ಡಿಂಗ್ ಬಳಿ ವ್ಯಾಪಕ ಅಪಘಾತಗಳಾಗುತ್ತಿದ್ದು, ಇಲ್ಲಿ ರಸ್ತೆಯಲ್ಲಿ  ಹಂಪ್ಸ್ ನಿರ್ಮಾಣ ಮಾಡಬೇಕೆನ್ನುವ ಅಗ್ರಹ ಜೋರಾಗಿ ಕೇಳಿ ಬರುತ್ತಿದೆ. ಗಣೇಶ್ ಬಿಲ್ಡಿಂಗ್ ಬಳಿ ವಿವಿಧ ಅಂಗಡಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿ, ಸಿಬಿಎಸ್ಇ ಸ್ಕೂಲ್, ಹತ್ತಿರದಲ್ಲಿ ಹೋಟೇಲ್, ಬೈಕ್ ಶೋರೂಂ ಹೀಗೆ ಹತ್ತು ವಲವು ವಾಣಿಜ್ಯ ವ್ಯಾಪಾರ ಕೇಂದ್ರಗಳು ಇರುವುದರಿಂದ ವಾಹನಗಳ ಓಡಾಟ ಅಧಿಕವಾಗಿದೆ.  ಸಹಜವಾಗಿಯೇ ಜನಸಂಖ್ಯೆ ಕೂಡಾ ಹೆಚ್ಚಾಗಿರುತ್ತದೆ. ಇನ್ನು ಇಲ್ಲಿ ನ್ಯಾಯಾಲಯ ಸಂಕೀರ್ಣ, ರಾಷ್ಟ್ರೀಕೃತ ಬ್ಯಾಂಕ್‌ಗಳು ತೆರೆದುಕೊಳ್ಳಲಿರುವುದರಿಂದ ಇನ್ನಷ್ಟು ಜನನಿಬಿಡವಾಗಲಿದೆ. ರಾಜ್ಯ ಹೆದ್ದಾರಿಯ ಬದಿಯಲ್ಲೇ ಇಷ್ಟೆಲ್ಲಾ ವ್ಯವಸ್ಥೆಗಳು ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ನಡೆಯುತ್ತಲೇ ಇವೆ. ಅನತಿ ದೂರದಲ್ಲಿ ತಾಲೂಕು ಆಡಳಿತ ಸೌಧ ಇರುವುದರಿಂದ ವಾಹಗಳ ಸಂಚಾರ ಅಧಿಕವಾಗಿದೆ, ರಾಜ್ಯ ಹೆದ್ದಾರಿ  ನೇರವಾಗಿ ಇರುವುದರಿಂದ ಎರಡೂ ಕಡೆಯಿಂದ ಬರುವ ವಾಹನಗಳು ಸಹಜವಾಗಿ ವೇಗವಾಗಿ ಬರುತ್ತವೆ. ಗಣೇಶ್ ಬಿಲ್ಡಿಂಗ್ ಕಡೆ ಬೈಕ್ ಹಾಗೂ ಇನ್ನಿತರ ವಾಹಗಳು ಕ್ರಾಸ್ ಮಾಡುವಾಗ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ಕ್ರಾಸ್ ಮಾಡುವ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿವೆ. ಇಲ್ಲಿ  ಬೈಕ್ ಸವಾರನೊಬ್ಬ ಕಾರಿಗೆ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ನೆಗೆದು ಚರಂಡಿಗೆ ಎಸೆಯಲ್ಪಟ್ಟ ಘಟನೆಯನ್ನು ಜನ ಮರೆತಿಲ್ಲ. ಈ ಘಟನೆಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದರೂ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕಳೆದ ವರ್ಷ ಇದೇ ಜಾಗದಲ್ಲಿ ಅಟೋ ರಿಕ್ಷಾಕ್ಕೆ ಬೈಕೊಂದು ಡಿಕ್ಕಿ ಹೊಡೆದು ಸವಾರನ  ಕೈ,ಕಾಲುಗಳ ಮೂಳೆ ಮುರಿತಕ್ಕೊಳಗಾಗಿದೆ. ಇಂತಹ ಘಟನೆಗಳು ನಡೆಯುತ್ತಲೇ ಇವೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ನೂರಕ್ಕಿಂತಲೂ ಹೆಚ್ಚು ಬೈಕ್, ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ನೋಡ ನೋಡುತ್ತಿದ್ದಂತೆ ಅಪಘಾತಗಳಾಗುತ್ತಾ ಭಯದ ವಾತಾವರಣ ನಿರ್ಮಾಣವಾಗಿದೆ. ಅಪಘಾತಗಳು ಹತ್ತಿರ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಡಬ ಠಾಣೆಯಲ್ಲಿ  ಈ ಬಗ್ಗೆ ಮಾಹಿತಿಯಿದೆ. ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಿರುವುರಿಂದ ಕಡಬ ತಾಲೂಕು ಕಛೇರಿಯಿಂದ ಬರುವ ಭಾಗ ಹಾಗೂ ಕಡಬ ಪೇಟೆಯಿಂದ ಬರುವ ಭಾಗಕ್ಕೆ ರಸ್ತೆಗೆ ಅಗತ್ಯವಾಗಿ ಹಂಪ್ಸ್ ನಿರ್ಮಿಸಬೇಕೆನ್ನುವ ಸಾರ್ವಜನಿಕರ ಬೇಡಿಕೆಗೆ ಹೆಚ್ಚಾಗಿದೆ. ಹಂಪ್ಸ್ ನಿರ್ಮಿಸಿ ಸಂಭಾವ್ಯ ಅಪಘಾತ ತಪ್ಪಿಸಬೇಕೆಂದು ಅನೇಕ ಬಾರಿ ಸಂಬಂಧಪಟ್ಟ  ಇಲಾಖೆಗೆ ಸಾರ್ವಜನಿಕರು ಅಹವಾಲು ಸಲ್ಲಿಸುತ್ತಲೇ ಬಂದರೂ ಬೇಡಿಕೆ ಈಡೇರಲೇ ಇಲ್ಲ.

Also Read  ಆಟೋ ರಿಕ್ಷಾದಲ್ಲಿ ಅಕ್ರಮ ದನ ಸಾಗಾಟ - ತಡೆಹಿಡಿದ ಬಜರಂಗದಳ ಕಾರ್ಯಕರ್ತರು

ಗಣೇಶ್ ಬಿಲ್ಡಿಂಗ್ ಬಳಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಲೇ ಇವೆ, ಪ್ರಾಣ ಹಾನಿಯಾಗದಿದ್ದರೂ ವಾಹನಗಳಿಗೆ ಅಪಾರ ಹಾನಿ , ಮನುಷ್ಯರಿಗೆ ಕೈ ಕಾಲುಗಳು ಊನ, ನೋವುಗಳ ಸಂಭವಿಸುತ್ತಲೇ ಇವೆ. ಇಲ್ಲಿ ವಾಹಗಳು ಕ್ರಾಸ್  ಮಾಡುವಾಗ ವೇಗವಾಗಿ ಬರುವ ವಾಹನಗಳು ಢಿಕ್ಕಿ ಹೊಡೆಯುತ್ತಿವೆ. ಇದನ್ನು ನೋಡಿ ನೋಡಿ, ಗಾಯಗೊಂಡವರಿಗೆ  ಶುಶ್ರೂಷೆ ನೀಡಿ ಸಾಕಾಗಿದೆ. ವಾಹನಗಳ ವೇಗ ನಿಯಂತ್ರಣ ಮಾಡಲು ಇಲ್ಲಿ ಹೆದ್ದಾರಿಗೆ ಹಂಪ್ಸ್ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ- ದಿವಾಕರ ಎಂ.ಗೋಪಾಲ್ ಇಲೆಕ್ಟ್ರಾನಿಕ್ಸ್ , ಶ್ರೀ ಗಣೇಶ್ ಬಿಲ್ಡಿಂಗ್ ಕಡಬ ರಾಜ್ಯ ಹೆದ್ದಾರಿಯ ಗಣೇಶ್ ಬಿಲ್ಡಿಂಗ್ ಬಳಿ ನಿರಂತರ ಅಪಘಾತಗಳು ಸಂಭವಿಸುತ್ತಿರುವುದು  ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈ ಹಿಂದೆ ಕೂಡಾ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಲಾಗಿದೆ. ಅಲ್ಲಿ ಹಂಪ್ಸ್ ನಿರ್ಮಾಣ ಮಾಡಲು ಮತ್ತೊಮ್ಮೆ  ಲೋಕೋಪಯೋಗಿ ಇಲಾಖೆಗೆ ವರದಿ ನೀಡಲಾಗುವುದು- ಅಭಿನಂದನ್ ಪಿ.ಎಸ್. ಠಾಣಾಧಿಕಾರಿಗಳು, ಕಡಬ ಪೋಲೀಸ್ ಠಾಣೆ ರಾಜ್ಯ ಹೆದ್ದಾರಿಯಾಗಿರುವುದರಿಂದ ವಾಹನ ಸಂಖ್ಯೆ ದಟ್ಟವಾಗಿ ವೇಗವಾಗಿ ಚಲಾವಣೆಯಾಗುತ್ತಿರುವುದು ಮಾಮೂಲಿಯಾಗಿದೆ. ಇದೇ ಕಾರಣದಿಂದ ನಿರ್ದಿಷ್ಟ ಸ್ಥಳಗಳಲ್ಲಿ ಅಪಘಾತಗಳ ತೀವ್ರತೆ ಜಾಸ್ತಿಯಾಗುತ್ತಿದೆ. ಗಣೇಶ್ ಬಿಲ್ಡಿಂಗ್ ಬಳಿ ಅಪಘಾತಗಳು ಜಾಸ್ತಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಪೋಲೀಸ್ ಇಲಾಖೆ ಸೂಕ್ತ ವರದಿ ನೀಡಿದಲ್ಲಿ ಅಲ್ಲಿ ಹಂಪ್ಸ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು- ಪ್ರಮೋದ್ ಕುಮಾರ್ ಕೆ.ಕೆ. ಸಹಾಯಕ ಇಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಸುಬ್ರಹ್ಮಣ್ಯ ಉಪವಿಭಾಗ

Also Read  ಪರಮೇಶ್ ಮೇಸ್ತ ಪ್ರಕರಣದ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ► ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಐಜಿಪಿ ನಿಂಬಾಲ್ಕರ್

 

 

error: Content is protected !!
Scroll to Top