ಸೋರೆಕಾಯಿಯ ಉಪಯೋಗಗಳು

(ನ್ಯೂಸ್ ಕಡಬ)newskadaba.com ಅ. 05.  ಸೋರೆಕಾಯಿ ಬಹಳ ಜನಪ್ರಿಯ ತರಕಾರಿ. ಇದರಲ್ಲಿ ಪಲ್ಯ, ಕೂಟು, ದೋಸೆ, ಹುಳಿ, ಹಲ್ವ, ಮಜ್ಜಿಗೆ ಹುಳಿ ಮಾಡುತ್ತಾರೆ. ಮಧುಮೇಹಿ, ಮೂಲವ್ಯಾಧಿ, ಕಾಮಾಲೆ, ರಕ್ತದ ಒತ್ತಡ ಇರುವವರು ಇದನ್ನು ಉಪಯೋಗಿಸಿದ್ದರೆ, ಶರೀರಕ್ಕೆ ತಂಪನ್ನುಂಟು ಮಾಡುತ್ತದೆ. ಈ ತರಕಾರಿ ಗರ್ಭಿಣಿ ಸ್ತ್ರೀಯರಿಗೆ, ಹೃದಯ ದೌರ್ಭಲ್ಯ, ಮಕ್ಕಳಿಗೆ ಎಲ್ಲರಿಗೂ ಒಳ್ಳೆಯ ತ್ರಾಣಿಕ.


ಪೌಷಕಾಂಶಗಳು: ಸೋರೆಕಾಯಿಯಲ್ಲಿ ತೇವಾಂಶ, ಖನಿಜಾಂಶ, ಕಾರ್ಬೋಹೈಡ್ರೈಟ್ಸ್, ನಾರಿನಾಂಶ, ಮೇದಸ್ಸು, ಕ್ಯಾಲ್ಸಿಯಮ್, ಮೆಘ್ನೇಶಿಯಮ್, ಸೋಡಿಯಂ, ಪಾಸ್ಪರಸ್, ಕಬ್ಬಿಣ, ಕಾಪರ್, ಗಂಧಕ, ‘ಸಿ’ ಜೀವಸತ್ವ ಇವೆಲ್ಲವೂ ಇದೆ. ಸೋರೆಕಾಯಿಯನ್ನು ಉಪಯೋಗಿಸುವುದರಿಂದ ಹಲವಾರು ರೋಗಗಳನ್ನು ನಿವಾರಣೆ ಮಾಡಲು ಸಹಾಯವಾಗುತ್ತದೆ.

 

error: Content is protected !!

Join the Group

Join WhatsApp Group