ಮಹಿಳೆಯರ ಟಿ20 ವಿಶ್ವಕಪ್- ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ಸೋಲು

(ನ್ಯೂಸ್ ಕಡಬ)newskadaba.com ದುಬೈ, ಅ. 05.  ಭಾರತ ಮಹಿಳಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ನಲ್ಲಿ ನಿರಾಶಾದಾಯಕ ಆರಂಭ ಕಂಡಿದೆ. ಇಲ್ಲಿನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರದ ಪಂದ್ಯದಲ್ಲಿ ಭಾರತ ವನಿತೆಯರ ತಂಡ, ನ್ಯೂಝಿಲೆಂಡ್ ವಿರುದ್ಧ 58 ರನ್ ಗಳ ಸೋಲು ಅನುಭವಿಸಿದೆ.


ನಾಯಕಿ ಶೋಪಿ ಡೆವಿನ್ (36 ಎಸೆತಗಳಲ್ಲಿ ಅಜೇಯ 57) ಅವರ ಸಾಹಸದಿಂದ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. 27 ರನ್ ಗಳಿಗೆ 2 ವಿಕೆಟ್ ಪಡೆದ ರೇಣುಕಾ ಠಾಕೂರ್ ಸಿಂಗ್ ಭಾರತದ ಪರ ಯಶಸ್ವಿ ಬೌಲರ್ ಎನಿಸಿದರು. ಆದರೆ ಎದುರಾಳಿ ತಂಡದ ರೋಸ್ ಮರಿ ಮೇರ್ ಅವರ ಮಾರಕ ದಾಳಿ (19ಕ್ಕೆ 4)ಗೆ ತತ್ತರಿಸಿದ ಭಾರತ 19 ಓವರ್ ಗಳಲ್ಲಿ 102 ರನ್ ಗಳಿಗೆ ಆಲೌಟ್ ಆಯಿತು. ನ್ಯೂಝಿಲೆಂಡ್ ನಾಯಕಿ ಶೋಪಿ ಡೆವಿನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Also Read  ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು ► ಭಾರತಕ್ಕೆ ಮತ್ತೆ ನಂ:1 ಪಟ್ಟ..!!!

 

error: Content is protected !!
Scroll to Top