ಟೊಮೆಟೊ ದರ ದುಬಾರಿ

(ನ್ಯೂಸ್ ಕಡಬ)newskadaba.com, ಬೆಂಗಳೂರು(.05):  ಈರುಳ್ಳಿ, ಬೆಳ್ಳುಳ್ಳಿ ದರ ಏರಿಕೆ ಬೆನ್ನಲ್ಲೇ ಇದೀಗ ಟೊಮೆಟೊ ದರ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಬರೆ ಎಳೆದಂತಾಗಿದೆ. ಕಳೆದ ಒಂದು ವಾರದ ಹಿಂದೆ ಟೊಮೆಟೊ ಕೆಜಿಗೆ 40 ರೂ. ಇದ್ದ ದರ ಇದೀಗ ಎರಡು ಪಟ್ಟು ಏರಿಕೆ ಕಂಡಿದೆ. ಅ.4 ರಿಂದ ಟೊಮೆಟೊವು ಕೆಜಿಗೆ 80 ರೂ.ಯಂತೆ ಮಾರಾಟವಾಗುತ್ತಿದೆ.

ಅಕಾಲಿಕ ಮಳೆಯಿಂದ ಟೊಮೆಟೊ ಇಳುವರಿ ಕಡಿಮೆಯಾಗಿದೆ. ಇದೇ ವೇಳೆಯಲ್ಲಿ ನವರಾತ್ರಿ ಹಬ್ಬವೂ ಆರಂಭಗೊಂಡಿದ್ದು, ಟೊಮೆಟೊ ಬೇಡಿಕೆ ಹೆಚ್ಚಾಗಿದೆ. ಟೊಮೆಟೊ ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಟೊಮೆಟೊ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Also Read  'ಯುವರತ್ನ'ನ ನಿಧನದಿಂದ ಆಘಾತಗೊಂಡ ಅಭಿಮಾನಿಗಳು ➤ ಮೃತರ ಸಂಖ್ಯೆ 11ಕ್ಕೆ ಏರಿಕೆ

error: Content is protected !!
Scroll to Top