(ನ್ಯೂಸ್ ಕಡಬ)newskadaba.com, ನವದೆಹಲಿ(ಅ.04): ಡ್ರಗ್ ಮುಕ್ತ ಭಾರತಕ್ಕೆ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಭಾರತದಿಂದ ವಶಪಡಿಸಿಕೊಳ್ಳಲಾದ 5,600 ಕೋಟಿ ರೂ.ಗಳ ಮಾದಕವಸ್ತು ರವಾನೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಕೈವಾಡವು “ಅಪಾಯಕಾರಿ ಮತ್ತು ನಾಚಿಕೆಗೇಡಿನ ಸಂಗತಿ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.ಕಾಂಗ್ರೆಸ್ ಆಡಳಿತದಲ್ಲಿ ಡ್ರಗ್ಸ್ ಸಮಸ್ಯೆಯಿಂದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ದುಸ್ಥಿತಿ ಎಲ್ಲರಿಗೂ ಗೊತ್ತಿದೆ “ಮೋದಿ ಸರ್ಕಾರವು ಯುವಕರನ್ನು ಕ್ರೀಡೆ, ಶಿಕ್ಷಣ ಮತ್ತು ಆವಿಷ್ಕಾರಗಳತ್ತ ಕೊಂಡೊಯ್ಯುತ್ತಿದ್ದರೆ, ಕಾಂಗ್ರೆಸ್ ಅವರನ್ನು ಡ್ರಗ್ಸ್‌ನ ಕತ್ತಲೆಯ ಜಗತ್ತಿಗೆ ಕೊಂಡೊಯ್ಯಲು ಬಯಸಿದೆ” ಎಂದು ಗೃಹ ಸಚಿವರು ಹೇಳಿದ್ದಾರೆ.
‘ಡ್ರಗ್ ಮುಕ್ತ ಭಾರತಕ್ಕೆ ಮೋದಿ ಸರ್ಕಾರ ಬದ್ಧ’ – ಅಮಿತ್ ಶಾ
