ಟೇಕ್‌ ಆಫ್‌ಗೆ ರೆಡಿಯಾಗಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ: ತಪ್ಪಿದ ಅವಘಡ

(ನ್ಯೂಸ್ ಕಡಬ)newskadaba.com ತಿರವನಂತಪುರ, ಅ. 04. ಕೆಲವೇ ಕ್ಷಣದಲ್ಲಿ ಹಾರಾಟ ಆರಂಭಿಸಬೇಕಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಏಕಾಏಕಿ ಹೊಗೆಕಾಣಿಸಿಕೊಂಡ ಘಟನೆ ಕೇರಳದ ತಿರುವನಂತಪುರಂ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ತಿರುವನಂತಪುರಂ ನಿಂದ ಒಮನ್‌ನಲ್ಲಿರುವ ಮಸ್ಕತ್‌ಗೆ ತೆರಳಲು ಸಜ್ಜಾಗಿದ್ದ IX549 ವಿಮಾನದ ಟೇಕ್‌ ಆಫ್‌ ಆಗುವ ಮುನ್ನ ದಟ್ಟ ಹೊಗೆ ಕಾಣಿಸಿಕೊಂಡಿದೆ. ಒಳಗಿದ್ದ ಪ್ರಯಾಣಿಕರೆಲ್ಲರೂ ಒಂದು ಕ್ಷಣಕ್ಕೆ ಆಘಾತಗೊಂಡಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ವಿಮಾನ ರನ್‌ ವೇನಲ್ಲಿ ಚಲಿಸುತ್ತಿದ್ದಾಗಲೇ ಈ ಹೊಗೆ ಕಾಣಿಸಿಕೊಂಡಿದ್ದು, ವಿಮಾನ ಸಿಬ್ಬಂದಿ ಅದನ್ನು ಗಮನಿಸಿದ ಕಾರಣ ಬಹುದೊಡ್ಡ ದುರಂತವೊಂದು ತಪ್ಪಿದೆ.

Also Read  ಕೋರ್ಟಿನ ಆವರಣದಲ್ಲೇ ಮಹಿಳೆ ಮೇಲೆ ಗುಂಡಿನ ದಾಳಿ

 

error: Content is protected !!
Scroll to Top