ಸಾಮಾಜಿಕ, ಆರ್ಥಿಕ ವರದಿ ಬಿಡುಗಡೆ ಮಾಡಲಿ: ಬಸವರಾಜ್ ರಾಮರೆಡ್ಡಿ ಒತ್ತಾಯ

(ನ್ಯೂಸ್ ಕಡಬ)newskadaba.com, ಕೊಪ್ಪಳ(.04): ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ನಮ್ಮದೇ ಸರಕಾರದಲ್ಲಿ ಸಮೀಕ್ಷೆ ಮಾಡಿಸಿದ ಸಾಮಾಜಿಕ, ಆರ್ಥಿಕ ಗಣತಿ ವರದಿಯನ್ನು ಇದೇ ವಾರದಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನವೆಂಬರ್ 01ರಂದು ಅನುಷ್ಠಾನ ಮಾಡಲಿ ಎಂದು ಸಿಎಂ ಆರ್ಥಿಕ ಸಲಹೆಗಾರ ಮತ್ತು ಶಾಸಕ ಬಸವರಾಜ್ ರಾಯರೆಡ್ಡಿ ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿವೃದ್ಧಿ ಚರ್ಚೆ ಮಾಡಿರುವೆ, 2013-18ರಲ್ಲಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಎಲ್ಲ ಧರ್ಮ, ಜಾತಿಗಳು ಒಳಗೊಂಡ ಸಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದ ಸಮೀಕ್ಷೆ ಮಾಡಿಸಿತ್ತು. ಆ ಸಮೀಕ್ಷೆಗೆ 165 ಕೋಟಿ ರೂ. ಕೊಟ್ಟು ಸರ್ವೇ ಮಾಡಿಸಿದೆ. ಕಾಂತರಾಜ ಸಾಮಾಜಿಕ, ಶೈಕ್ಷಣಿಕಸಮೀಕ್ಷೆ ಮಾಡಿದ್ದಾರೆ. ಆಗ ಸಿಎಂಗೆ ಕೊನೆಯ ಅವಧಿಯಲ್ಲಿ ವರದಿ ತಲುಪಿರಲಿಲ್ಲ. ನಂತರ ಕುಮಾರಸ್ವಾಮಿ ಸಿಎಂ ಆದಾಗಲೂ ಬಿಡುಗಡೆ ಮಾಡಲಿಲ್ಲ. ಬೊಮ್ಮಾಯಿ ಸರ್ಕಾರ ವರದಿ ಬಿಡುಗಡೆ ಮಾಡಲಿಲ್ಲ ಎಂದು ಹೇಳಿದರು.

Also Read  ಪುತ್ತೂರಿನ ವಿವಿಧೆಡೆ ಜನರೇಟರ್ ಬ್ಯಾಟರಿ ಕಳವು ಪ್ರಕರಣ ➤ ಆರೋಪಿ ಬಂಧನ

error: Content is protected !!
Scroll to Top