(ನ್ಯೂಸ್ ಕಡಬ)newskadaba.com ಭಟ್ಕಳ, ಅ.04. ಶಿರ್ಸಿ ತಾಲೂಕಿನ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕು ಸತತ 2 ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗಳಿಸಿದ್ದು, ಭಟ್ಕಳದ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ದೀಕ್ಷಾ ದೇವಾಡಿಗ 800 ಮೀ., 1,500 ಮೀ., 3,000 ಮೀ,, 4×400 ಮೀ. ರಿಲೆ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ. ಪವಿತ್ರಾ ಮಡಿವಾಳ ಉದ್ದ ಜಿಗಿತದಲ್ಲಿ ಪ್ರಥಮ, 4×100 ಮೀ. ರಿಲೆ ಪ್ರಥಮ, ತ್ರಿವಿಧ ಜಿಗಿತದಲ್ಲಿ ದ್ವಿತೀಯ. ಮೋನಿಕಾ ದೇವಾಡಿಗ 400 ಮೀ. ಓಟದಲ್ಲಿ ದ್ವಿತೀಯ, 4×400 ಮೀ. ರಿಲೆ ಪ್ರಥಮ, ಸಿಂಚನಾ ಈಶ್ವರ ನಾಯ್ಕ 800 ಮೀ. ಓಟದಲ್ಲಿ ದ್ವಿತೀಯ, 4×400 ಮೀ. ರಿಲೆ ಪ್ರಥಮ, ಆಶಿತಾ ವೆಂಕಟೇಶ ನಾಯ್ಕ 1,500 ಓಟ ಮೀ. ದ್ವಿತೀಯ, 3000 ಮೀ. ಓಟ ದ್ವಿತೀಯ, 4×400 ಮೀ. ರಿಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ದ್ವಿತೀಯ, ಭವ್ಯಾ ದೇವಾಡಿಗ ಎತ್ತರ ಜಿಗಿತ ಪ್ರಥಮ, 100 ಮೀ. ಹರ್ಡಲ್ಸ್ ದ್ವಿತೀಯ, 4×100 ಮೀ. ರಿಲೆ ಪ್ರಥಮ, ನಂದಿನಿ ನಾಯ್ಕ 400 ಹರ್ಡಲ್ಸ್ ದ್ವಿತೀಯ, ರೂಪಾಕ್ಷಿ ಮೊಗೇರ ಚಕ್ರ ಎಸೆತ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಬಾಲಕರ ವಿಭಾಗದಲ್ಲಿ ಧನರಾಜ ಎನ್. ನಾಯ್ಕ 100 ಮೀ ಓಟದಲ್ಲಿ ಪ್ರಥಮ, ಹಿತೇಶ ಎಂ. ನಾಯ್ಕ 4×400 ಮೀ ರೀಲೆ ಪ್ರಥಮ, ಗುರುರಾಜ ಗಣಪತಿ ನಾಯ್ಕ 4×400 ಮೀ ರಿಲೆ ಪ್ರಥಮ, ಕೇಶವ ಎಮ್ ಎಮ್ ನಾಯ್ಕ 4×400 ಮೀ ರೀಲೆ ಪ್ರಥಮ. ದೀಪಕ ಪಿ. ನಾಯ್ಕ 4×400 2 / 2 ಮೀ ರೀಲೆ ಪ್ರಥಮ, .ಲೋಹಿತ್ ಮರಾಠಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಬಾಲಕಿಯರ ವಿಭಾಗದ ಗುಂಪು ಆಟಗಳಾದ ಕಬಡ್ಡಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಹಾಗೂ ಶಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕರಾಟೆ ಸ್ಪರ್ಧೆಯಲ್ಲಿ ಪ್ರತ್ಯಕ್ಷ ನಾಯ್ಕ, ವಿನುತಾ ನಾಯ್ಕ, ರಾಧಿಕಾ ಗೊಂಡ, ರಕ್ಷಾ ಖಾರ್ವಿ, ಚೆಸ್ ಸ್ಪರ್ಧೆಯಲ್ಲಿ ಅಂಕಿತ ನಾಯ್ಕರ್ ಹಾಗೂ ಜಾಕ್ಷನ್ ಡಿಸೋಜಾ ಗುಡ್ಡಗಾಡು ಓಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.