(ನ್ಯೂಸ್ ಕಡಬ)newskadaba.com ಬೆಂಗಳೂರು, ಅ.04. ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ಹಷಿಕಾ ಪೂಣಚ್ಚ ಪತಿ ಭುವನ್ ಪೊನ್ನಣ್ಣ ನಮ್ಮ “ಚೈಕಾರ್ತಿ ಮೂಡಿ” ಜನಿಸಿದ್ದನ್ನು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಹರ್ಷಿ ಮತ್ತು ಮಗಳು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಹರ್ಷಿಕಾಳಂತೆ ಇದ್ದರೆ ಅವಳ ಪ್ರಕಾರ ಮಗು ನನ್ನ ಕಾಪಿ ಎನ್ನುತ್ತಿದ್ದಾಳೆ. ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಹೆಣ್ಣು ಮಗುವಿನ ಆಗಮನದಿಂದ ಸಂತಸಗೊಂಡಿದ್ದಾರೆ.