(ನ್ಯೂಸ್ ಕಡಬ)newskadaba.com, ಕುಂದಾಪುರ(ಅ.04): ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯು ಜನ ವಿರೋಧಿಯಾಗಿದೆ. ಕೇಂದ್ರ ಸರಕಾರ ಈಗ 6ನೇ ಭಾರಿಗೆ ಅಧಿಸೂಚನೆ ನೀಡಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನವಸತಿ ಪ್ರದೇಶವನ್ನು ವರದಿಯಿಂದ ದೂರ ಇಟ್ಟು, ದಟ್ಟಕಾಡನ್ನು ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ಇಲ್ಲ. ಭೂ ಸರ್ವೇ ಮೂಲಕ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕು. ಜನರಿಗೆ ಇರುವ ಆತಂಕವನ್ನು ದೂರ ಮಾಡಲು ಎಲ್ಲಾ ಜನಪ್ರತಿನಿಧಿಗಳು ಸೇರಿ ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ: ಕಸ್ತೂರಿ ರಂಗನ್ ವರದಿ ಜನವಿರೋಧಿ ಎಂದು ಪ್ರತಿಭಟನೆ
