(ನ್ಯೂಸ್ ಕಡಬ)newskadaba.com ಕಾಸರಗೋಡು, ಅ.04. ಸ್ಕೂಟರ್ ಮಗುಚಿ ರಸ್ತೆ ಗೆಸೆಯಲ್ಪಟ್ಟು ಮಹಿಳೆಯೋರ್ವಳ ಮೇಲೆ ಲಾರಿ ಹಾದು ಹೋದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಪೈಕ ಚಂದ್ರಪಾರೆಯ ಮಣಿ ಎಂಬವರ ಪತ್ನಿ ಶಶಿಕಲಾ (31) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಚಟ್ಟಂಚಾಲ್ – ಚೆರ್ಕಳ ರಸ್ತೆಯ ತೆಕ್ಕಿಲ್ ಬಳಿ ಅಪಘಾತ ನಡೆದಿದೆ. ಶಶಿಕಲಾ, ಪತಿ ಮಣಿ ಹಾಗೂ ಇಬ್ಬರು ಮಕ್ಕಳ ಜೊತೆ ಸ್ಕೂಟರ್ ನಲ್ಲಿ ಚೆರ್ಕಳ ದಿಂದ ಚಟ್ಟಂ ಚಾಲ್ ಕಡೆಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಸ್ಕೂಟರ್ ಮಗುಚಿ ಬಿದ್ದಿದೆ. ಅಪಘಾತದಲ್ಲಿ ಪತಿ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.