ಮನೆಗೆ ತಂದಿರಿಸಿದ್ದ ದಾರಂದ ಬಿದ್ದು ಬಾಲಕಿ ಮೃತ್ಯು..!

(ನ್ಯೂಸ್ ಕಡಬ)newskadaba.com, ಮಡಂತ್ಯಾರು(.03): ಹೊಸ ಮನೆಗೆ ಅಳವಡಿಸಲು ತಂದಿರಿಸಲಾಗಿದ್ದ ದಾರಂದ ಬಿದ್ದು ಬಾಲಕಿ ಮೃತಪಟ್ಟ ಘಟನೆ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾ ಕೊನಲೆಯಲ್ಲಿ ಸಂಭವಿಸಿದೆ. ಮಗುವಿನ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಗುರುವಾರ ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲಿತ್ತು. ಅದಕ್ಕಾಗಿ ಮನೆಯ ಪಕ್ಕದಲ್ಲಿ ದಾರಂದವನ್ನು ತಂದಿರಿಸಿದ್ದರು. ಬಾಲಕಿ ಆಟವಾಡುತ್ತಿದ್ದಾಗ ದಾರಂದ ಆಕೆಯ ತಲೆಗೆ ಬಿದ್ದು ಗಂಭೀರ ಗಾಯವಾಗಿತ್ತು. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಆಕೆ ಮೃತಪಟ್ಟಿದೆ. ಕೇರ್ಯ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

Also Read  ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿ ➤ 73ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ

error: Content is protected !!
Scroll to Top