(ನ್ಯೂಸ್ ಕಡಬ)newskadaba.com, ಬೆಂಗಳೂರು(ಅ.03): ನವ ಕರ್ನಾಟಕ ರತ್ನ ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅ. 4 ಮತ್ತು 5ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಅನಿವಾಸಿ ಕನ್ನಡಿಗರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾಡು ನುಡಿ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ, ಸಂಘಟನ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ “ನವ ಕರ್ನಾಟಕ ರತ್ನಪ್ರಶಸ್ತಿ“ ಗೌರವ ಪುರಸ್ಕಾರಕ್ಕೆ ಸತೀಶ್ ಕುಮಾರ್ ಬಜಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ನವ ಕರ್ನಾಟಕ ರತ್ನ ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ
