(ನ್ಯೂಸ್ ಕಡಬ)newskadaba.com, ಕುಂದಾಪುರ(ಅ.03): ಇಷ್ಟು ವರ್ಷಗಳ ಹೋರಾಟ ನಡೆದರೂ ಕಸ್ತೂರಿರಂಗನ್ ವರದಿಯ ಸಡಿಲಿಕೆ ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ನಮ್ಮ ಹೋರಾಟದ ತೀವ್ರತೆ ನಿರೀಕ್ಷಿತ ಮತವನ್ನು ತಲುಪದೇ ಇರುವುದು. ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದ್ದಾರೆ. ಕೇರಳ ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯ ಸಡಿಲಿಕೆಗೆ ಎಲ್ಲಾ ಜನಪ್ರತಿನಿಧಿಗಳು ಮತ್ತು ಜನರು ಸಂಘಟಿತವಾಗಿ ಹೋರಾಟ ನಡೆಸಿದ್ದಲ್ಲದೆ ಕೇಂದ್ರ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗೆ ಮನದಟ್ಟು ಮಾಡುವ ಮೂಲಕ ಯಶಸ್ಸು ಕಂಡುಕೊಂಡಿದ್ದಾರೆ. ನಮ್ಮ ಹೋರಾಟವು ಕೇರಳ ಮಾದರಿಯಲ್ಲಿ ನಡೆಯಬೇಕಾಗಿದೆ ಆ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸಂಘಟಿತರಾಗಿ ಸಂಬಂಧ ಪಟ್ಟವರಿಗೆ ಸ್ಥಳೀಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ಕಸ್ತೂರಿ ರಂಗನ್ ವರದಿ ಸಡಿಲಿಕೆ ಇನ್ನೂ ಸಾದ್ಯವಾಗಿಲ್ಲ-ಗುರುರಾಜ ಗಂಟಿಹೊಳೆ
