ಮಂಗಳೂರು: ಸಿಎಂ ಗೆ ತಪ್ಪಿನ ಅರಿವಾದಂತಿದೆ-ಸಂಸದ ಚೌಟ

(ನ್ಯೂಸ್ ಕಡಬ)newskadaba.com, ನವದೆಹಲಿ(.02): ಸಿಎಂ ಸಿದ್ದರಾಮಯ್ಯ ಅವರು 14 ಸೈಟ್‌ ವಾಪಸ್‌ ಕೊಟ್ಟಿರುವುದು ಅವರಿಗೆ ಬುದ್ಧಿ ಬಂದ ಹಾಗೆ ಕಾಣುತ್ತದೆ. ತನ್ನ ತಪ್ಪಿನ ಅರಿವಾದಂತೆ ಇದೆ, ಇನ್ನಾದರೂ ರಾಜೀನಾಮೆ ಕೊಡಲಿ ಎಂದು ಸಂಸದ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಒತ್ತಾಯಿಸಿದ್ದಾರೆ.  ಸಿಎಂ ಅವರು ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಂವಿಧಾನದ ಆಶಯಗಳಿಗೆ ಗೌರವ ಕೊಡಲಿ. ಅವೈಜ್ಞಾನಿಕ ನೀತಿಯಿಂದಾಗಿ ರಾಜ್ಯವನ್ನೇ ದಿವಾಳಿ ಹಂತಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ.

ಒಂದಿಂಚು ಅಭಿವೃದ್ಧಿ ಇಲ್ಲದೆ ಜನ ಕಂಗೆಟ್ಟಿದ್ದಾರೆ. ವಾಲ್ಮೀಕಿ ನಿಗಮದಿಂದಲೇ ನೇರವಾಗಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ. ದಲಿತರ ಜಾಗವನ್ನು ಕಬಳಿಸಿ, ಪತ್ನಿ ಹೆಸರಿಗೆ ಸೈಟ್‌ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

Also Read  20 ಟನ್ ಫಿಶ್ ಕಳವು ➤ಆರೋಪಿಯ ವಿರುದ್ದ ದೂರು ದಾಖಲು      

error: Content is protected !!