(ನ್ಯೂಸ್ ಕಡಬ) newskadaba.com ಕಡಬ, ಅ.03. ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆ ಮರ್ಧಾಳ, ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ ಹೋಮಿಯೋಪತಿ, ಫಿಸಿಯೋಥೆರಪಿ ಮತ್ತು ಸ್ಪೀಚ್ ಥೆರಪಿ ವಿಭಾಗದ ಜಂಟಿ ಆಶ್ರಯದಲ್ಲಿ ಉಚಿತ ಹೋಮಿಯೋಪತಿ, ಫಿಸಿಯೋಥೆರಪಿ ಮತ್ತು ಸ್ಪೀಚ್ ಥೆರಪಿ ಆರೋಗ್ಯ ಶಿಬಿರವು ಅಕ್ಟೋಬರ್ 05 ಶನಿವಾರದಂದು ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯಲ್ಲಿ ನಡೆಯಲಿದೆ.
ಮಕ್ಕಳ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದು, ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುವುದು, ಹುಳದ ಸಮಸ್ಯೆಗಳು, ಮಕ್ಕಳ ಅಲರ್ಜಿ, ವಾಂತಿ – ಭೇದಿ, ಜ್ವರ, ಉಸಿರಾಟದ ತೊಂದರೆ, ಕಲಿಕೆಯಲ್ಲಿ ಏಕಾಗ್ರತೆಯ ಕೊರತೆಯನ್ನು ನೀಗಿಸುವುದು, ಗಮನದ ಕೊರತೆ/ಚಂಚಲತೆ/ಅತೀ ಚಟುವಟಿಕೆ, ಬೆಳವಣಿಗೆಯ ತೊಂದರೆ, ನಿದ್ದೆಯಲ್ಲಿ ನಡೆಯುವುದು, ಹಾಸಿಗೆ ಒದ್ದೆ ಮಾಡುವುದು, ಗಾಯನ ಬಳ್ಳಿಯ ಗಂಟುಗಳು, ಸ್ನಾಯುಗಳ ತಪಾಸಣೆ ಮೊದಲಾದ ಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9449761922 ಅಥವಾ 9380655754 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.