ಎ.ಜಿ. ನೂರಾನಿ ಎಂಬ ನಿರ್ಭೀತ ವಿದ್ವಾಂಸ

(ನ್ಯೂಸ್ ಕಡಬ) newskadaba.com ಅ. 02.  ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಮಂದಿರ ನಿರ್ಮಾಣ 1990ರ ದಶಕದಿಂದಲೂ ಭಾರತದ ರಾಜಕೀಯವನ್ನು ಆಳವಾಗಿ ಪ್ರಭಾವಿಸಿದೆ. ಇದರೊಂದಿಗೆ 370ನೇ ವಿಧಿ ರದ್ದತಿಯ ರಾಜಕೀಯವೂ ಕಾಶ್ಮೀರದ ಕುರಿತ ಚರ್ಚೆಯನ್ನು ಬದಲಾಯಿಸಿತು. ಈ ವಿಷಯಗಳ ಬಗ್ಗೆ ಸತತವಾಗಿ ಸಂಶೋಧನಾತ್ಮಕವಾಗಿ ಬರೆದು ಹಲವು ಮಹತ್ವದ ಸತ್ಯಗಳನ್ನು ತೆರೆದಿಟ್ಟವರು ಎ.ಜಿ. ನೂರಾನಿ. ಅವರು ಆಗಸ್ಟ್ 29ರಂದು ನಿಧನರಾಗಿದ್ದಾರೆ.


ಅವರ ಹೆಸರು ಎಷ್ಟು ದೀರ್ಘವಾಗಿದೆಯೋ ಅವರ ಕೆಲಸ ಅದಕ್ಕಿಂತಲೂ ಬಹಳ ಬಹಳ ದೀರ್ಘ. ಹಲವು ವಿಷಯಗಳಲ್ಲಿ ಪರಿಣತಿಯಿದ್ದ, ಅಧಿಕಾರಯುತವಾಗಿ ಬರೆಯಬಲ್ಲ ವಕೀಲ, ಲೇಖಕ ಮತ್ತು ಬುದ್ಧಿಜೀವಿ ಅವರಾಗಿದ್ದರು. 1960ರಿಂದ ಅವರು ದೇಶ ವಿದೇಶಗಳ ಪತ್ರಿಕೆಗಳು, ನಿಯತಕಾಲಿಕಗಳಿಗೆ ಬರೆಯಲು ಶುರು ಮಾಡಿದ್ದರು. ಅಲ್ಲಿಂದ 60 ವರ್ಷಗಳ ಕಾಲ ನಿರಂತರವಾಗಿ ಬರೆದರು. ದೇಶ ವಿದೇಶಗಳ ಕೋಟ್ಯಂತರ ಓದುಗರ ಮೇಲೆ ಪ್ರಭಾವ ಬೀರಿದ್ದರು ಮತ್ತು ಅವರೆಲ್ಲರ ಬದುಕಿನ ಭಾಗವೇ ಆಗಿದ್ದರು. ನಾವು ಕನಿಷ್ಠ ಎ.ಜಿ. ನೂರಾನಿಯವರ ಬರಹಗಳನ್ನು ಓದಿಕೊಂಡು, ಈ ದೇಶದ ಸಂವಿಧಾನದ ಆಶಯಗಳನ್ನು ಪಾಲಿಸುತ್ತಾ, ಆ ಆಶಯಗಳಿಗೆ ಬದ್ಧರಾಗಿರುವುದೇ ಅವರಿಗೆ ಸಲ್ಲಿಸುವ ಅತ್ಯುತ್ತಮ ಶ್ರದ್ಧಾಂಜಲಿ..

 

 

error: Content is protected !!

Join the Group

Join WhatsApp Group