(ನ್ಯೂಸ್ ಕಡಬ) newskadaba.com ಅ. 02. ಉಪ್ಪಿನ ಸೇವನೆ ಕಡಿಮೆ ಮಾಡುವುದಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಮೊದಲ ವರದಿಯನ್ನು ಬಿಡುಗಡೆ ಮಾಡಿದೆ. ಅಧಿಕ ಸೋಡಿಯಂ ಸೇವನೆ ಜಾಗತಿಕವಾಗಿ ಹಲವು ಸಾವು ಹಾಗೂ ರೋಗಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.
ದೇಹಕ್ಕೆ ತೀರಾ ಅಗತ್ಯವಾದ ಪೌಷ್ಟಿಕಾಂಶ ಎನಿಸಿದ ಸೋಡಿಯಂ ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದು ಹೃದ್ರೋಗ, ಪಾಶ್ರ್ವವಾಯು, ಅವಧಿಪೂರ್ವ ಸಾವಿಗೂ ಕಾರಣವಾಬಹುದು. ಅಧಿಕ ಪ್ರಮಾಣದ ಸೋಡಿಯಂ ಅಂಶ ಇರುವ ಉಪ್ಪನ್ನು ಸಾಧ್ಯವಾದಷ್ಟೂ ಕಡಿಮೆ ಸೇವಿಸುವುದು ಉತ್ತಮ.