ಬಂಟ್ವಾಳ: ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.11. ಸುಮಾರು 06 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ ಘಟನೆ ಭಾನುವಾರದಂದು ವೇಣೂರಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಮೇರಮಜಲು ಗ್ರಾಮದ ಅಬ್ಬೆಟ್ಟು ಮನೆ ನಿವಾಸಿ ಫ್ರಾನ್ಸಿಸ್ ಡಿ’ಸೋಜಾ ಎಂಬವರ ಪುತ್ರ ಲಾರೆನ್ಸ್ ಮೆಲ್ವಿನ್ ಡಿ ಸೋಜಾ ಯಾನೆ ಜೀವನ್ ಯಾನೆ ಸಲ್ಮಾನ್ ಯಾನೆ ಮಹಮ್ಮದ್ ಸಲ್ಮಾನ್(32) ಎಂದು ಗುರುತಿಸಲಾಗಿದೆ. 2012 ರ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಕಾಶಿಪಟ್ನ ಪೆರಲ್ದಗುಡ್ಡೆ ಎಂಬಲ್ಲಿ ವಾಸವಾಗಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಭಾನುವಾರದಂದು ಮೂಡಬಿದ್ರೆಯಲ್ಲಿ ಮೀನು ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಬಂಧಿಸಿದ್ದಾರೆ.

Also Read  ಕಡಬದಲ್ಲಿ ಪೂರ್ಣ ಪ್ರಮಾಣದ ಎಪಿಎಮ್‌ಸಿ ಸ್ಥಾಪನೆ

error: Content is protected !!
Scroll to Top