1.09 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಮೂವರು ಅರೆಸ್ಟ್

crime, arrest, suspected

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 02.  ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮಾಲೀಕನ ಮನೆಯಿಂದ 1.09 ಕೋಟಿ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಹಾಗೂ ಆತನ ಇಬ್ಬರು ಸಹಚರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಪ್ರಮುಖ ಆರೋಪಿ ಸನ್ಯಾಸಿ ಮಠ ನಂದೀಶ್, ಹೆಚ್.ಎಂ.ನಂದೀಶ್ ಹಾಗೂ ಪ್ರತಾಪ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹನುಮೇಗೌಡ ಪತ್ತೆಗೆ ಹುಡುಕಾಟ ಮುಂದುವರೆದಿದೆ.

Also Read  ಗುಜರಾತ್‌ನ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ - 3 ಸಾವು, 6 ಮಂದಿಗೆ ಗಾಯ

 

error: Content is protected !!
Scroll to Top