ರೇಣುಕಾಸ್ವಾಮಿ ಕೊಲೆ ಪ್ರಕರಣ: 3 ಆರೋಪಿಗಳು ಇಂದು ಜೈಲಿನಿಂದ ಬಿಡುಗಡೆ

(ನ್ಯೂಸ್ ಕಡಬ) newskadaba.com ತುಮಕೂರು, ಅ. 02. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕವೂ ಬಿಡುಗಡೆಯಾಗದೇ ಪರದಾಡುತ್ತಿದ್ದ ಮೂವರು ಆರೋಪಿಗಳು ಇಂದು ತುಮಕೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸೆ.23 ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು. ಎ-16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿದೆ.

Also Read  ಮಂಗಳೂರು: ವಾಹನಗಳಲ್ಲಿ ಪ್ರಖರ ಎಲ್ಐಡಿ ಲೈಟ್ ಬಳಕೆ 1170 ಪ್ರಕರಣ ದಾಖಲು, 5.86 ಲಕ್ಷ ರೂ. ದಂಡ.!

 

 

error: Content is protected !!
Scroll to Top