ಬ್ಯಾಡ್ಮಿಂಟನ್ ಟೂರ್ನಮೆಂಟ್‌ ‘ಸ್ಯಾಂಡಲ್‌ವುಡ್ ಕಪ್-2024’: ಮನುರಂಜನ್ ನಾಯಕತ್ವದ ರಣಧೀರ ರೈಡರ್ಸ್ ತಂಡಕ್ಕೆ ವಿಜಯಮಾಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 02.  ಸ್ಯಾಂಡಲ್‌ವುಡ್ ಕಪ್-2024 ಬ್ಯಾಡ್ಮಿಂಟನ್ ಟೂರ್ನಮೆಂಟ್‌ಗೆ ತೆರೆ ಬಿದ್ದಿದೆ. ಸೆಪ್ಟೆಂಬರ್ 28-29ರಂದು ಕೋರಮಂಗಲದ ಇನ್ ಡೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಮನುರಂಜನ್ ನಾಯಕತ್ವದ ರಣಧೀರ ರೈಡರ್ಸ್ ತಂಡ ಕಪ್ ಗೆದ್ದಿದ್ದು, ಸೃಜನ್ ನಾಯಕತ್ವದ ಅಪ್ಪು ಪ್ಯಾಂಥರ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.

ಸ್ಯಾಂಡಲ್‌ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕೇವಲ ಮನರಂಜನೆ ಉದ್ದೇಶದಿಂದ ಶುರು ಮಾಡಿರುವುದಲ್ಲ. ಬದಲಾಗಿ ಒಂದೊಳ್ಳೆ ಕಾರ್ಯ ಇಟ್ಟುಕೊಂಡು ಈ ಕಪ್ ಪ್ರಾರಂಭಿಸಲಾಗಿದೆ. ಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು , ವಿತರಕರು, ನಿರ್ಮಾಪಕರು ಕಷ್ಟದಲ್ಲಿರುವ ಸಹಾಯ ಮಾಡುವುದು ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಮುಖ ಧ್ಯೇಯ.

Also Read  ಮುರ್ಡೇಶ್ವರ: ಸಮುದ್ರದಲ್ಲಿ ಮುಳುಗಿ ಬೆಂಗಳೂರಿನ ಯುವಕ ಮೃತ್ಯು

 

error: Content is protected !!
Scroll to Top