ಯುರೋಪ್ ದೇಶಗಳಿಗೆ ಪೂರೈಕೆಯಾಗಲಿವೆ ಭಾರತದ 2000 ಮಷಿನ್ ಗನ್

(ನ್ಯೂಸ್ ಕಡಬ)newskadaba.com, ಕಾನ್ಪುರ(.02) : ಕಾನ್ಪುರದಲ್ಲಿರುವ ಸ್ಮಾಲ್ ಆರ್ಮ್ಸ್ ಫ್ಯಾಕ್ಟರಿಗೆ ಯುರೋಪಿಯನ್ ದೇಶಗಳಿಂದ ಮೆಷಿನ್ ಗನ್‌ಗಳಿಗಾಗಿ ದೊಡ್ಡ ಆರ್ಡರ್ ಬಂದಿದೆ. ಒಂದು ನಿಮಿಷದಲ್ಲಿ 1000 ಸುತ್ತು ಗುಂಡು ಹಾರಿಸಬಲ್ಲ ಅತ್ಯಾಧುನಿಕ ಮೀಡಿಯಂ ಮೆಷಿನ್ ಗನ್‌ಗಳ 2000 ಯುನಿಟ್‌ಗಳನ್ನು ಈ ಕಾರ್ಖಾನೆ ಪೂರೈಸಲಿದೆ. ಮುಂದಿನ ಮೂರು ವರ್ಷಗಳಲ್ಲಿ ಹಲವು ಹಂತಗಳಲ್ಲಿ ಈ ಆರ್ಡರ್ ಪೂರ್ಣಗೊಳ್ಳಲಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸರ್ಕಾರಿ ಸ್ವಾಮ್ಯದ ಆರ್ಡಿನೆನ್ಸ್ ಕಂಪನಿ ಸ್ಮಾಲ್ ಆರ್ಮ್ಸ್ ಫ್ಯಾಕ್ಟರಿಯಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಬೇಡಿಕೆಯ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತದೆ.

Also Read  Breaking news ಬಂಟ್ವಾಳದಲ್ಲಿ ಮತ್ತೊಂದು ಕೊರೋನ ದೃಢ: 47  ವರ್ಷದ ಮಹಿಳೆಗೆ ತಗುಲಿದ ಸೋಂಕು

error: Content is protected !!
Scroll to Top