ಡಿ.29ಕ್ಕೆ ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 02.  ಭಾಷಾಂತರ ಸೇರಿ ಹಲವು ಲೋಪದೋಷ ಕಂಡುಬಂದ ಹಿನ್ನೆಲೆ ಮುಂದೂಡಿಕೆಯಾಗಿದ್ದ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ದಿನಾಂಕ ನಿಗದಿ ಮಾಡಿದೆ. ಶೀಘ್ರ ದಿನಾಂಕ ಘೋಷಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದರಿಂದ, ಡಿ.29ಕ್ಕೆ ಕೆಎಎಸ್‌ ಪ್ರಿಲಿಮ್ಸ್‌ ಮರು ಪರೀಕ್ಷೆಯನ್ನು ಕೆಪಿಎಸ್‌ಸಿ ನಿಗದಿಪಡಿಸಿದೆ.

ಈ ದಿನಾಂಕದಂದು ಯಾವುದೇ ಪರೀಕ್ಷೆಯು ನಿಗದಿಯಾಗದಿರುವ ಕುರಿತು ಪರಿಶೀಲಿಸಲಾಗಿದೆ. ಆದರೆ ಈ ತಿದ್ದುಪಡಿ ಅಧಿಸೂಚನೆ ಜಾರಿಯಾದ ನಂತರ ಇನ್ನಿತರೆ ಯಾವುದೇ ಪರೀಕ್ಷೆ ನಿಗದಿಯಾದಲ್ಲಿ ಅದಕ್ಕೆ ಆಯೋಗವು ಹೊಣೆಯಾಗುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಪರೀಕ್ಷೆಯನ್ನು ಮುಂದೂಡುವುದಿಲ್ಲ ಎಂದು ತಿಳಿಸಿದೆ.

Also Read  ಕೊರೊನಾ, ಇನ್ಫ್ಲುಯೆನ್ಸ್ ಪ್ರಕರಣ ಉಲ್ಬಣ    ➤ ಮಾಸ್ಕ್ ಧರಿಸುವ ಅಗತ್ಯವನ್ನು ಒತ್ತಿ ತಿಳಿಸಿದ ಪ್ರಧಾನಿ

error: Content is protected !!
Scroll to Top