ಕಲ್ಲುಗುಡ್ಡೆ: ಪ್ರತ್ಯೇಕವಾಗಿ ನಡೆಯುತ್ತಿದ್ದ ಅಕ್ರಮ ಜುಗಾರಿ ಅಡ್ಡೆಗಳಿಗೆ ದಾಳಿ ► ಆರು ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಮಾ.11. ಪ್ರತ್ಯೇಕವಾಗಿ ನಡೆಯುತ್ತಿದ್ದ ಅಕ್ರಮ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ಆರು ಮಂದಿಯನ್ನು ಬಂಧಿಸಿ 3440 ರೂ. ಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ಕಲ್ಲುಗುಡ್ಡೆಯಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ ಖಚಿತ ಮಾಹಿತಿಯ ಮೇರೆಗೆ ಕಲ್ಲುಗುಡ್ಡೆಯ ದೋಂತಿಲಡ್ಕ ಎಂಬಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿ ಸ್ಥಳೀಯ ನಿವಾಸಿಗಳಾದ ರಾಜು, ಕೇಶವ ಹಾಗೂ ಪೊಡಿಯ ಎಂಬವರನ್ನು ಬಂಧಿಸಿ ಆಟಕ್ಕೆ ಬಳಸಿದ 1990 ರೂ. ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತ್ಯೇಕ ಪ್ರಕರಣವೊಂದರಲ್ಲಿ ಭಾನುವಾರ ಸಂಜೆ ನೂಜಿಬಾಳ್ತಿಲ ಗ್ರಾಮದ ಗೋಳಿಯಡ್ಕ ಬಸ್ ನಿಲ್ದಾಣದ ಬಳಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ಆರೋಪಿಗಳಾದ ದೇವಸ್ಯ, ಅನೀಶ್ ಕುಮಾರ್ ಹಾಗೂ ಗಣೇಶ್ ಎಂಬವರನ್ನು ಬಂಧಿಸಿ ಆಟಕ್ಕೆ ಬಳಸಿದ 1450 ರೂ. ಗಳನ್ನು ವಶಪಡಿಸಿಕೊಂಡು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಎಸ್ಕೆಎಸ್ಸೆಎಸ್ಸೆಫ್ ಗೂನಡ್ಕ ಶಾಖೆ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಕನಕಮಜಲು ಉಸ್ತಾದ್ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ

error: Content is protected !!
Scroll to Top