(ನ್ಯೂಸ್ ಕಡಬ)newskadaba.com, ನವದೆಹಲಿ(ಅ.01) : ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಬಳಕೆ 19 ಕೆಜಿಯ ಎಲ್‌ಪಿಜಿ ಸಿಲಿಂಡರ್ ದರವನ್ನು48.5೦ಪೈಸೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ 5ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್ ದರವನ್ನು 12ರೂ. ತೈಲ ಕಂಪನಿಗಳು ಏರಿಕೆ ಮಾಡಿದ್ದು, ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಅಡುಗೆ ಅನಿಲಗಳ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ. ಪ್ರಸ್ತುತ 14ಕೆಜಿ ಸಿಲಿಂಡರ್ ದರ 803ರೂ.ನಷ್ಟಿದೆ.
ಅಕ್ಟೋಬರ್ ತಿಂಗಳಿನಲ್ಲಿ ದೀಪಾವಳಿ, ನವರಾತ್ರಿ ಹಬ್ಬಗಳು ಸಮೀಪಿಸುತ್ತಿರುವ ಬೆನ್ನಲ್ಲೆ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಏರಿಕೆ ಮಾಡಿದೆ.
ಕಳೆದ ತಿಂಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು29 ರೂ.ಗೆ ಏರಿಕೆ ಮಾಡಿತ್ತು ತಿಂಗಳಾರಂಭದಲ್ಲಿ ತೈಲ ಕಂಪನಿಗಳು ಅನಿಲ ದರವನ್ನು ಪರಿಷ್ಕರಣೆ ಮಾಡಿದ್ದು, ಈಗ ಮತ್ತೆ48.50 ಪೈಸೆಯಷ್ಟು ಏರಿಕೆಯಾಗಿದೆ.