ಕಾಣಿಯೂರು: ಅಪರಿಚಿತ ಗಂಡಸಿನ ಮೃತದೇಹದ ಅಸ್ಥಿಪಂಜರ ಪತ್ತೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.11. ಅಪರಿಚಿತ ಗಂಡಸಿನ ಕೊಳೆತ ಮೃತದೇಹದ ಅಸ್ಥಿಪಂಜರವೊಂದು ಪೊದೆಯಲ್ಲಿ ಪತ್ತೆಯಾದ ಘಟನೆ ಕಾಣಿಯೂರು ಸಮೀಪದ ಕೂಡುರಸ್ತೆ ಎಂಬಲ್ಲಿ ಭಾನುವಾರದಂದು ಕಂಡುಬಂದಿದೆ.

ಮೃತದೇಹವು ಸಂಪೂರ್ಣ ಕೊಳೆತಿದ್ದು, ಅಸ್ಥಿಪಂಜರ ಕಂಡುಬಂದಿದೆ ಎನ್ನಲಾಗಿದೆ. ಸುಮಾರು 50 ರಿಂದ 60 ವರ್ಷ ಪ್ರಾಯದ ಗಂಡಸಿನ ಮೃತದೇಹವಾಗಿರಬಹುದೆಂದು ಅಂದಾಜಿಸಲಾಗಿದ್ದು, ಪಕ್ಕದಲ್ಲೇ ಕೀಟನಾಶಕದ ಬಾಟಲ್ ಪತ್ತೆಯಾಗಿದೆ. ಒಂದು ಕಾಲನ್ನು ಯಾವುದೋ ಪ್ರಾಣಿಗಳು ತಿಂದು ದೇಹದಿಂದ ಬೇರ್ಪಟ್ಟು ಪೊದೆಯಲ್ಲಿ ಮಲಗಿಸಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಪೊದೆಯೊಂದರಿಂದ ಕೊಳೆತ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಮೃತದೇಹದ ಅಸ್ಥಿಪಂಜರವನ್ನು ಕಂಡು ಬೆಳ್ಳಾರೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕಾಗಮಿಸಿದ ಬೆಳ್ಳಾರೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಚರಿತ್ರೆ ಪ್ರಸಿದ್ಧ ಬೆಳ್ಳಾರೆ ಮಖಾಂ ಉರೂಸಿಗೆ ವಿದ್ಯುಕ್ತ ಚಾಲನೆ

error: Content is protected !!
Scroll to Top