ಹಿರಿಯ ನಟ ಮಿಥುನ್ ಚಕ್ರವರ್ತಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗೌರವ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.30. ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ಭಾರತೀಯ ಚಲನಚಿತ್ರೋದ್ಯಮದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅವರ ಪ್ರಯಾಣ ಹಾಗೂ ಸಿನಿ ರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

ಮಿಥುನ್ ಚಕ್ರವರ್ತಿ ಅವರು ಕೇವಲ ನಟರಷ್ಟೇ ಅಲ್ಲ, ಟಿವಿ ನಿರೂಪಕ, ನಿರ್ಮಾಪಕ, ರಾಜಕಾರಣಿ ಆಗಿದ್ದಾರೆ. ಹಿಂದಿ ಹಾಗೂ ಬಂಗಾಳಿ ಸಿನಿಮಾಗಳಲ್ಲಿ ಅತ್ಯಂತ ಹೆಚ್ಚು ಹೆಸರು ಪಡೆದಿದ್ದಾರೆ. ಇವರು 1976ರಲ್ಲಿ ಮೊದಲ ಬಾರಿಗೆ ಹಿಂದಿ ಸಿನಿಮಾ ಮೃಗಯಾದಲ್ಲಿ ಅಭಿನಯ ಮಾಡಿದ್ದರು. ಅಂದಿನಿಂದ ಈವರೆಗೂ ಚಿತ್ರರಂಗದಲ್ಲಿ ದುಡಿಯುತ್ತಿದ್ದಾರೆ.

Also Read  ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳ ಮಾರಾಟ ನಿಷೇಧ   ➤ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ..!

 

error: Content is protected !!
Scroll to Top